ಶ್ರೀನಗರ: ಕಣಿವ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶ್ರೀನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ತಮ್ಮನ್ನೂ ಭಾನುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉಸ್ಮಾನ್ ಮಜೀದ್ ಹಾಗೂ ಸಿಪಿಎಂ ಶಾಸಕ ಎಂ.ವೈ. ತಾರಿಗಾಮಿ ಅವರು ಹೇಳಿಕೆ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣ ಹಾಗೂ ಭಯೋತ್ಪಾದಕರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
-
I’m especially concerned about the people living in the Pir Panchal & Chenab Valley regions. These areas have been very susceptible to attempts at communal violence. I hope the Govt has taken adequate precautions to ensure no communal trouble breaks out.
— Omar Abdullah (@OmarAbdullah) August 4, 2019 " class="align-text-top noRightClick twitterSection" data="
">I’m especially concerned about the people living in the Pir Panchal & Chenab Valley regions. These areas have been very susceptible to attempts at communal violence. I hope the Govt has taken adequate precautions to ensure no communal trouble breaks out.
— Omar Abdullah (@OmarAbdullah) August 4, 2019I’m especially concerned about the people living in the Pir Panchal & Chenab Valley regions. These areas have been very susceptible to attempts at communal violence. I hope the Govt has taken adequate precautions to ensure no communal trouble breaks out.
— Omar Abdullah (@OmarAbdullah) August 4, 2019
ನಿಷೇಧಾಜ್ಞೆ ಜಾರಿಯ ಪ್ರಯುಕ್ತ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾವೇಶ ಆಯೋಜಿಸದಂತೆ ನಿರ್ಬಂಧ ಹೇರಲಾಗಿದೆ. ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಶ್ರೀನಗರದಾದ್ಯಂತ 144 ಸೆಕ್ಷನ್ ಜಾರಿ ಗೊಳಿಸಲಾಗಿದೆ.
ಟ್ವಿಟ್ಟರ್ನಲ್ಲಿ ಮುಖಂಡರ ಆಕ್ರೋಶ:
'ಶಾಂತಿಗಾಗಿ ಹೋರಾಡಿದ ನಮ್ಮಂತಹ ಚುನಾಯಿತ ಪ್ರತಿನಿಧಿಗಳನ್ನು ಗೃಹ ಬಂಧನದಲ್ಲಿದ್ದಾರೆ ಎಂಬುದು ಎಷ್ಟು ವಿಪರ್ಯಾಸ. ಜನರ ಮತ್ತು ಅವರ ಧ್ವನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲಕ್ಕೀಡಾಗುತ್ತಿರುವುದನ್ನು ಇಡೀ ಜಗತ್ತು ಗಮನಿಸುತ್ತಿದೆ' ಎಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ಜನರಿಗೆ ನಮ್ಮಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ. ಆದರೆ, ಸರ್ವಶಕ್ತನಾದ ಅಲ್ಲಾ ಯೋಜಿಸಿದ್ದು ಉತ್ತಮವಾಗಿ ನಡೆಯುತ್ತದೆ ಎಂಬುದನ್ನು ನಾನು ದೃಢವಾಗಿ ನಂಬುತ್ತೇನೆ. ನಾವು ಈಗ ನೋಡದೇ ಇರಬಹುದು. ಆದರೆ, ನಾವು ಅವರ ಮಾರ್ಗಗಳನ್ನು ಎಂದಿಗೂ ಅನುಮಾನಿಸಬಾರದು. ಎಲ್ಲರಿಗೂ ಶುಭವಾಗಲಿ, ಸುರಕ್ಷಿತವಾಗಿರಿ ಎಂದು ಒಮರ್ ಅಬ್ದುಲ್ಲಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
-
How ironic that elected representatives like us who fought for peace are under house arrest. The world watches as people & their voices are being muzzled in J&K. The same Kashmir that chose a secular democratic India is facing oppression of unimaginable magnitude. Wake up India
— Mehbooba Mufti (@MehboobaMufti) August 4, 2019 " class="align-text-top noRightClick twitterSection" data="
">How ironic that elected representatives like us who fought for peace are under house arrest. The world watches as people & their voices are being muzzled in J&K. The same Kashmir that chose a secular democratic India is facing oppression of unimaginable magnitude. Wake up India
— Mehbooba Mufti (@MehboobaMufti) August 4, 2019How ironic that elected representatives like us who fought for peace are under house arrest. The world watches as people & their voices are being muzzled in J&K. The same Kashmir that chose a secular democratic India is facing oppression of unimaginable magnitude. Wake up India
— Mehbooba Mufti (@MehboobaMufti) August 4, 2019
ಪಿರ್ಪಂಚಲ್ ಮತ್ತು ಚಿನಾಬ್ ಪ್ರದೇಶಗಳಲ್ಲಿ ವಾಸಿಸುವ ಜನರ ಬಗ್ಗೆ ವಿಶೇಷವಾದ ಕಾಳಜಿ ಇದೆ. ಈ ಪ್ರದೇಶಗಳ ಜನರು ಕೋಮು ಹಿಂಸಾಚಾರದ ಕೃತ್ಯಗಳಿಗೆ ತುತ್ತಾದವರು. ಯಾವುದೇ ಕೋಮು ಸಂಘರ್ಷ ಉಂಟಾಗದಂತೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಎಂಬುದನ್ನು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.