ಪಂಜಾಬ್ : ಮಹಾಮಾರಿ ಕೊರೊನಾಗೆ ಪಂಜಾಬ್ನಲ್ಲಿ ಮತ್ತೊಂದು ಬಲಿಯಾಗಿದೆ. ದೇಶದಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊವಿಡ್-19ಗೆ ಎರಡನೇ ವ್ಯಕ್ತಿ ಸಾವನ್ನಪ್ಪಿದಂತಾಗಿದೆ. ಈವರೆಗೆ ಒಟ್ಟು 38 ಪ್ರಕರಣಗಳು ಅಲ್ಲಿ ವರದಿಯಾಗಿವೆ. ಇಂದು ಮೃತಪಟ್ಟ ವ್ಯಕ್ತಿಯು ಮಧುಮೇಹದಿಂದ ಕೂಡ ಬಳಲುತ್ತಿದ್ದರು.
ಇನ್ನು ಭಾರತದಲ್ಲಿ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ. ಆಶಾದಾಯ ಏನಂದ್ರೆ ಈವರೆಗೂ ದೇಶದಲ್ಲಿ ಒಟ್ಟು 1024 ಕೊರೊನಾ ಪ್ರಕರಣಗಳಲ್ಲಿ 96 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.