ತಿರುವನಂಥಪುರ(ಕೇರಳ): ಚೀನಾದಲ್ಲಿ ತೀವ್ರ ಆತಂಕ ಮೂಡಿಸಿರುವ ಕೊರೊನಾ ವೈರಸ್ ಭಾರತಕ್ಕೆ ಹರಡಿದ್ದು, ಕೇರಳದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಾಸಂಗಕ್ಕೆಂದು ಚೀನಾಕ್ಕೆ ತೆರಳಿದ್ದ ಯುವಕನಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್ ಕಂಡುಬಂದಿತ್ತು. ಇದು ಭಾರತದಲ್ಲಿ ಪತ್ತೆಯಾದ ಮೊದಲ ಕೊರೊನಾ ಪ್ರಕರಣವಾಗಿತ್ತು. ಇದೀಗ ಕೇರಳದಲ್ಲೇ ಮತ್ತೊಂದು ಪ್ರಕರಣ ಪತ್ತೆಯಾಗಿದೆ.
ಚೀನಾದಿಂದ ಇತ್ತೀಚೆಗಷ್ಟೇ ಆಗಮಿಸಿದ್ದ ಕೇರಳದ ಮೂಲದ ಮತ್ತೋರ್ವ ವ್ಯಕ್ತಿಯಲ್ಲಿ ವೈರಸ್ ಕಂಡುಬಂದಿರುವುದು ದೃಢಪಟ್ಟಿದ್ದು, ರೋಗಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ.