ETV Bharat / bharat

ಚೀನಾದೊಂದಿಗಿನ ದೆಹಲಿ - ಮೀರತ್ ಮೆಟ್ರೋ ಒಪ್ಪಂದ ಕೈಬಿಡಿ: ಮಹಾ ಸಚಿವರ ಆಗ್ರಹ - ಚೀನಾದ ಕಂಪನಿ

ದೆಹಲಿ - ಮೀರತ್ ಮೆಟ್ರೋ ಯೋಜನಾ ಕಾರ್ಯವನ್ನು ಭಾರತೀಯ ಕಂಪನಿ ಎಲ್ ಅಂಡ್ ಟಿಯನ್ನು ಬದಿಗಿರಿಸಿ ಚೀನಾದ ಸಂಸ್ಥೆಯಾದ ಶಾಂಘೈ ಟನಲ್ ಎಂಜಿನಿಯರಿಂಗ್ ಕಂಪನಿಗೆ ನೀಡಲಾಗಿತ್ತು. ಈಗ ಚೀನಾ ಕಂಪನಿಗೆ ನೀಡಿರುವ ಗುತ್ತಿಗೆ ವಾಪಸ್​ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನ ಮಹಾ ಸಚಿವರು ಒತ್ತಾಯಿಸಿದ್ದಾರೆ.

Maha minister
ಜಿತೇಂದ್ರ ಅವ್ಹದ್
author img

By

Published : Jun 18, 2020, 1:56 PM IST

ಮುಂಬೈ: ಲಡಾಖ್‌ನಲ್ಲಿ ಚೀನಾದ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಹತ್ಯೆಗೀಡಾದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಎನ್‌ಸಿಪಿ ಸಚಿವ ಜಿತೇಂದ್ರ ಅವ್ಹದ್ ಅವರು ಚೀನಾದ ಸಂಸ್ಥೆಯೊಂದರಿಂದ ಪಡೆದ ದೆಹಲಿ-ಮೀರತ್ ಮೆಟ್ರೋ ಕೆಲಸದ ಒಪ್ಪಂದವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಆತ್ಮನಿರ್ಬರ್​​​ ಭಾರತ್ (ಸ್ವಾವಲಂಬಿ ಭಾರತ) ಮಾತುಕತೆಯ ನಂತರ ಚೀನಾದ ಕಂಪನಿಯೊಂದಕ್ಕೆ ಒಪ್ಪಂದವನ್ನು ನೀಡಲಾಗಿತ್ತು. ಈ ಒಪ್ಪಂದವನ್ನು ಯಾರು ನೀಡಿದರು? ರೈಲ್ವೆ ಯಾರ ವ್ಯಾಪ್ತಿಗೆ ಬರುತ್ತದೆ? ಇದು ಕೇಂದ್ರವಲ್ಲವೇ, ಎಂದು ಅವ್ಹದ್ ಅವರು ಈ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಜೂನ್ 12 ರಂದು ದೆಹಲಿ-ಮೀರತ್ ಮೆಟ್ರೋ ಯೋಜನಾ ಕಾರ್ಯವನ್ನು ಚೀನಾದ ಸಂಸ್ಥೆಯಾದ ಶಾಂಘೈ ಟನಲ್ ಎಂಜಿನಿಯರಿಂಗ್ ಕಂಪನಿಗೆ, ಭಾರತೀಯ ಕಂಪನಿ ಎಲ್ ಅಂಡ್ ಟಿಯನ್ನು ಬದಿಗಿರಿಸಿ ನೀಡಲಾಗಿತ್ತು. ಜೂನ್ 15 ರಂದು ಚೀನಿಯರು ನಮ್ಮ 20 ಜವಾನರನ್ನು ಕೊಂದು ಹಾಕಿದ್ದಾರೆ. ಇದು ಯಾವ ರೀತಿಯ ವಿದೇಶಿ ನೀತಿ, ಚೀನಾಕ್ಕೆ ತಕ್ಕ ಪಾಠವನ್ನು ಭಾರತ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ

ಇನ್ನು ಅನಿರೀಕ್ಷಿತವಾಗಿ ಎಂಬಂತೆ ಮಹಾರಾಷ್ಟ್ರ ಸರ್ಕಾರ ಸೋಮವಾರ ಚೀನಾದ ಮೂರು ಕಂಪನಿಗಳೊಂದಿಗೆ 5,000 ಕೋಟಿ ರೂ.ಗಳ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಮಹಾ ಸರ್ಕಾರದ ಅಧಿಕೃತ ಮಾಹಿತಿಯೊಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.