ETV Bharat / bharat

ಪರಸ್ಪರರ ಸಾರ್ವಭೌಮತೆಯನ್ನು ಗೌರವಿಸಿ.. ಚೀನಾ, ಪಾಕ್​​ ವಿರುದ್ಧ ಮೋದಿ ಅಸಮಾಧಾನ - SCO summit updates

ಶಾಂಘೈ ಸಹಕಾರ ಸಂಘದ ಸಿದ್ಧಾಂತಕ್ಕೆ ಅನುಗುಣವಾಗಿ ಭಾರತ ಕೆಲಸ ಮಾಡುತ್ತಿದೆ ಎಂದ ಮೋದಿ, ಕೋವಿಡ್ ವೇಳೆಯಲ್ಲಿ ಸುಮಾರು 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಔಷಧವನ್ನು ರವಾನಿಸಿದ್ದನ್ನು ಸ್ಮರಿಸಿಕೊಂಡರು..

modi
ಮೋದಿ
author img

By

Published : Nov 10, 2020, 8:02 PM IST

ನವದೆಹಲಿ : ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಅನಾವಶ್ಯಕವಾಗಿ ಉಭಯ ದೇಶಗಳ ವಿಚಾರಗಳನ್ನು ಶಾಂಘೈ ಸಹಕಾರ ಸಂಘಟನೆಯಲ್ಲಿ ತರಲು ಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನ ಹಾಗೂ ಚೀನಾ ದೇಶಗಳ ಈ ನಡೆ ಖಂಡನೀಯವಾಗಿದೆ. ಶಾಂಘೈ ಸಹಕಾರ ಸಂಘದ ನೀತಿಗಳಿಗೆ ಇದು ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಂಘೈ ಸಹಕಾರ ಸಂಘದ ಎಲ್ಲಾ ರಾಷ್ಟ್ರಗಳು ಪರಸ್ಪರರ ಗಡಿ ಸಮಗ್ರತೆಯನ್ನು ಗೌರವಿಸಬೇಕು ಎಂದು ಭಾಷಣದಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ ಈ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಭಾರತ ಬಲವಾದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಬೇರೊಂದು ರಾಷ್ಟ್ರದ ಸಾರ್ವಭೌಮತೆಯನ್ನು ಹಾಗೂ ಗಡಿ ಸಮಗ್ರತೆಯನ್ನು ಮತ್ತೊಂದು ರಾಷ್ಟ್ರ ಗೌರವಿಸಬೇಕೆಂದು ಹೇಳಿದ ಮೋದಿ, ಉಭಯ ದೇಶಗಳ ವಿಚಾರವನ್ನು ಇಲ್ಲಿಗೆ ತರುವುದು ಶಾಂಘೈ ಸಹಕಾರ ಸಂಘಟನೆಯ ಮೂಲಭೂತ ಸಿದ್ಧಾಂತಗಳಿಗೆ ವಿರುದ್ಧ ಎಂದು ಹೇಳಿದರು.

ಶಾಂಘೈ ಸಹಕಾರ ಸಂಘದ ಸಿದ್ಧಾಂತಕ್ಕೆ ಅನುಗುಣವಾಗಿ ಭಾರತ ಕೆಲಸ ಮಾಡುತ್ತಿದೆ ಎಂದ ಮೋದಿ, ಕೋವಿಡ್ ವೇಳೆಯಲ್ಲಿ ಸುಮಾರು 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಔಷಧವನ್ನು ರವಾನಿಸಿದ್ದನ್ನು ಸ್ಮರಿಸಿಕೊಂಡರು.

ಇದರ ಜೊತೆಗೆ ಭಾರತವು ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಯನ್ನು ಬಲವಾಗಿ ನಂಬುತ್ತದೆ ಮತ್ತು ಭಯೋತ್ಪಾದನೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ದ್ರವ್ಯ ದಂಧೆ ವಿರುದ್ಧ ಸದಾ ಧ್ವನಿಗೂಡಿಸುತ್ತಿದೆ ಎಂದು ಉಲ್ಲೇಖಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.