ETV Bharat / bharat

ಕೊರೊನಾ ಹರಡುವ ರೀತಿ ಪತ್ತೆ ಮಾಡಿದ ವಿಜ್ಞಾನಿಗಳು: ಇಲ್ಲಿದೆ ಕುತೂಹಲಕಾರಿ ಮಾಹಿತಿ - ಕೊರೊನಾ ವೈರಸ್ ಔಷಧಿ

ನೋವೆಲ್ ಕೊರೊನಾ ವೈರಸ್​ ದಾಳಿ ಮಾಡುವ ಕೋಶದ ವ್ಯವಸ್ಥೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿ ಮತ್ತಷ್ಟು ವೈರಸ್​ಗಳು ಹುಟ್ಟುವಂತೆ ವ್ಯವಸ್ಥೆ ಮಾರ್ಪಡಿಸುತ್ತದೆ. ಕೆಲ ಬಾರಿ ಇಂಥ ಹೈಜಾಕಿಂಗ್​ ಆದಾಗ ದಾಳಿಯಾದ ಕೋಶದ ಪ್ರೊಟೀನ್ ಹಾಗೂ ಇತರ ಮಾಲಿಕ್ಯೂಲ್​ಗಳಾದ ಎಂಜೈಮ್​ಗಳ ಕಾರ್ಯವನ್ನು ಏರುಪೇರು ಮಾಡುವ ವೈರಸ್​, ಪ್ರೊಟೀನ್​ಗಳಲ್ಲಿನ ರಾಸಾಯನಿಕ ಕ್ರಿಯೆಗಳನ್ನು ಮಾರ್ಪಡಿಸುತ್ತದೆ ಎಂದು ಯುರೋಪಿಯನ್ ಬಯೊ ಇನ್ಫರ್ಮೆಟಿಕ್ಸ್​ ಇನ್​ಸ್ಟಿಟ್ಯೂಟ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

COVID-19 from jumping to other cells
COVID-19 from jumping to other cells
author img

By

Published : Jul 2, 2020, 1:41 PM IST

ಲಾಸ್ ಎಂಜೆಲೀಸ್ (ಯುಎಸ್​ಎ): ನೋವೆಲ್ ಕೊರೊನಾ ವೈರಸ್​ ತಾನು ದಾಳಿ ಮಾಡುವ ಜೀವಕೋಶದ ಪ್ರೊಟೀನ್​​ಗಳನ್ನು ಹೈಜಾಕ್ ಮಾಡಿ, ಅಲ್ಲಿಂದ ಉದ್ದನೆಯ ಕೈ ರೀತಿಯ ರಚನೆಯನ್ನು ಬೆಳೆಸಿಕೊಂಡು ಹತ್ತಿರದ ಜೀವಕೋಶಕ್ಕೆ ತಲುಪುವ ಮೂಲಕ ಸೋಂಕು ಹರಡುತ್ತಾ ಹೋಗುವಂತೆ ಮಾಡುತ್ತದೆ ಎಂದು ಸಂಶೋಧಕರು ತೋರಿಸಿ ಕೊಟ್ಟಿದ್ದಾರೆ. ಇದೇ ಸಂಶೋಧನೆಯ ಆಧಾರದಲ್ಲಿ ವೈರಸ್​ ಹರಡುವ ಪ್ರಕ್ರಿಯೆ ತಡೆಗಟ್ಟಬಲ್ಲ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ನೋವೆಲ್ ಕೊರೊನಾ ವೈರಸ್​ ದಾಳಿ ಮಾಡುವ ಕೋಶದ ವ್ಯವಸ್ಥೆಯನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿ ಮತ್ತಷ್ಟು ವೈರಸ್​ಗಳು ಹುಟ್ಟುವಂತೆ ವ್ಯವಸ್ಥೆ ಮಾರ್ಪಡಿಸುತ್ತದೆ. ಕೆಲ ಬಾರಿ ಇಂಥ ಹೈಜಾಕಿಂಗ್​ ಆದಾಗ ದಾಳಿಯಾದ ಕೋಶದ ಪ್ರೊಟೀನ್ ಹಾಗೂ ಇತರ ಮಾಲಿಕ್ಯೂಲ್​ಗಳಾದ ಎಂಜೈಮ್​ಗಳ ಕಾರ್ಯವನ್ನು ಏರುಪೇರು ಮಾಡುವ ವೈರಸ್​, ಪ್ರೊಟೀನ್​ಗಳಲ್ಲಿನ ರಾಸಾಯನಿಕ ಕ್ರಿಯೆಗಳನ್ನು ಮಾರ್ಪಡಿಸುತ್ತದೆ ಎಂದು ಯುರೋಪಿಯನ್ ಬಯೊ ಇನ್ಫರ್ಮೆಟಿಕ್ಸ್​ ಇನ್​ಸ್ಟಿಟ್ಯೂಟ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

ದಾಳಿಯಾದ ಶರೀರದ ಕೋಶದ ಪ್ರೊಟೀನ್ ಮತ್ತು ವೈರಲ್​ ಪ್ರೊಟೀನ್​ಗಳಲ್ಲಾಗುವ ಎಂಜೈಮ್​ ಪ್ರಕ್ರಿಯೆಯನ್ನು ಫಾಸ್ಫೊರೈಲೇಶನ್ ಎಂದು ಕರೆಯಲಾಗಿದೆ. ಈ ಫಾಸ್ಫೊರೈಲೇಶನ್ ಪ್ರಕ್ರಿಯೆಯಲ್ಲಿ ಪ್ರೊಟೀನ್​ ಒಳಗಡೆ ಫಾಸ್ಫೊರಿಲ್ ಗ್ರೂಪ್ ರಚನೆಯಾಗಿ ಕೈನೇಸ್ ಎಂಬ ಎಂಜೈಮ್ ಬಿಡುಗಡೆಯಾಗುತ್ತದೆ. ಜೀವಕೋಶದ ಬಹುತೇಕ ಎಲ್ಲ ಕಾರ್ಯವಿಧಾನ, ಕೋಶದಿಂದ ಕೋಶದ ಸಂಪರ್ಕ, ಕೋಶದ ಬೆಳವಣಿಗೆ ಹಾಗೂ ಕೋಶದ ಸಾವು ಎಲ್ಲವನ್ನೂ ಈ ಕೈನೇಸ್ ಎಂಜೈಮ್ ನಿಯಂತ್ರಿಸುತ್ತದೆ ಎಂದು ಸಂಡೇ ಜರ್ನಲ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

ದಾಳಿ ಮಾಡುವ ದೇಹದ ಪ್ರೊಟೀನ್​ಗಳ ಫಾಸ್ಫೊರೈಲೇಶನ್ ಮಾದರಿಗಳನ್ನು ಬದಲಾಯಿಸುವ ಮೂಲಕ, ಒಂದು ವೈರಸ್ ತನ್ನನ್ನು ತಾನು ಬೇರೆ ಕೋಶಗಳಿಗೆ ಹಾಗೂ ನಂತರ ಬೇರೆ ಜೀವಿಗಳಿಗೆ ಹರಡುವ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುತ್ತದೆ.

ವೈರಸ್​ನೊಂದಿಗೆ ಸಂಪರ್ಕಕ್ಕೆ ಬರುವ ಶೇ 12 ರಷ್ಟು ಪ್ರೊಟೀನ್​ಗಳು ಮಾರ್ಪಾಟಾಗಿರುತ್ತವೆ. ಇಂಥ ಮಾರ್ಪಾಟುಗಳನ್ನು ಬಹುತೇಕ ಕೈನೇಸ್​ಗಳು ನಿಯಂತ್ರಿಸುತ್ತವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಹೀಗಾಗಿ ಕೋವಿಡ್​ ವೈರಸ್​ನ ಹರಡುವಿಕೆ ತಡೆಗಟ್ಟಲು ಹಾಗೂ ಅದನ್ನು ಗುಣಪಡಿಸಲು ಇವೇ ಕೈನೇಸ್​ ಎಂಜೈಮ್​ಗಳನ್ನು ಗುರಿಯಾಗಿಸಿಕೊಂಡು ಔಷಧಗಳನ್ನು ತಯಾರಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.