ETV Bharat / bharat

'ಬಿಜೆಪಿಯ ಪ್ರತಿಭಟನಾ ಮೆರವಣಿಗೆ ಭಯದಿಂದ ಮಮತಾ ಕಚೇರಿ ಮುಚ್ಚಿದ್ದಾರೆ' - ಮಾರ್ಚ್ ಟು ನಬಣ್ಣ

ಮಮತಾ ದೀದಿ 'ಮಾರ್ಚ್ ಟು ನಬಣ್ಣ' ರ್ಯಾಲಿಯಿಂದ ಭಯಭೀತರಾಗಿ ಅವರ ಕಚೇರಿ 'ನಬಣ್ಣ'ವನ್ನು ಮುಚ್ಚಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

tejasvi mamatha
tejasvi mamatha
author img

By

Published : Oct 8, 2020, 1:10 PM IST

ಕೋಲ್ಕತಾ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಸರ್ಕಾರವು ಮುಖ್ಯಮಂತ್ರಿಗಳ ಕಚೇರಿಯಾದ 'ನಬಣ್ಣ'ವನ್ನು ಬಿಜೆಪಿಯ ಪ್ರತಿಭಟನಾ ಮೆರವಣಿಗೆಯ ಭಯದಿಂದ ಮುಚ್ಚಿದೆ ಎಂದು ಹೊಸದಾಗಿ ನೇಮಕಗೊಂಡ ಬಿಜೆವೈಎಂ ಅಧ್ಯಕ್ಷ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.

ರ್ಯಾಲಿಗಳಿಗೆ ಅನುಮತಿ ನಿರಾಕರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಪ್ರತಿಭಟನಾ ಕಾರ್ಯಕ್ರಮವು ಯಶಸ್ವಿಯಾಗಿದ್ದರೆ ಕನಿಷ್ಠ 50,000 ಜನರು ಭಾಗವಹಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕು ಹರಡುವ ಆತಂಕವನ್ನು ಉಲ್ಲೇಖಿಸಿ ಪಶ್ಚಿಮ ಬಂಗಾಳ ಸರ್ಕಾರ ಬಿಜೆಪಿ ಯುವ ವಿಭಾಗದ 'ಮಾರ್ಚ್ ಟು ನಬಣ್ಣ' ಪ್ರತಿಭಟನಾ ಮೆರವಣಿಗೆಗೆ ಕೇವಲ 100 ಜನರಿಗೇ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿತ್ತು. ನೈರ್ಮಲ್ಯೀಕರಣದ ಉದ್ದೇಶಕ್ಕಾಗಿ ಅಕ್ಟೋಬರ್ 8ರಿಂದ ಎರಡು ದಿನಗಳವರೆಗೆ ನಬಣ್ಣ ಕಚೇರಿಯನ್ನು ಮುಚ್ಚಲಾಗುವುದು ಎಂದು ಸರ್ಕಾರ ಘೋಷಿಸಿದೆ.

"ಮಮತಾ ದೀದಿ ಭಯಭೀತರಾಗಿದ್ದಾರೆ. ಹೀಗಾಗಿ ಅವರು ಕಚೇರಿಯನ್ನು ಮುಚ್ಚಿದ್ದಾರೆ" ಎಂದು ಮಾಧ್ಯಮಗೋಷ್ಠಿಯಲ್ಲಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.