ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ 2012ರಲ್ಲಿ ನಡೆದಿರುವ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಪವನ್ ಕುಮಾರ್ ಗುಪ್ತಾ ಸಲ್ಲಿಕೆ ಮಾಡಿರುವ ಕ್ಯುರೇಟಿವ್ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾ ಮಾಡಿದೆ.
ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು ಎಂದು ಕೋರಿ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ತಿರಸ್ಕರಿಸಿದೆ.
25 ವರ್ಷದ ಪವನ್ ಗುಪ್ತಾ ಇದೇ ಮೊದಲ ಸಲ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದ್ದು, ರಾಷ್ಟ್ರಪತಿಗಳಿಂದ ಕ್ಷಮಾದಾನ ಕೋರಿ ಅರ್ಜಿ ಕೂಡ ಸಲ್ಲಿಕೆ ಮಾಡಿಲ್ಲ. ಆದರೆ ಈಗಾಗಲೇ ಮುಕೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದು, ರಾಷ್ಟ್ರಪತಿಗಳು ಅವುಗಳನ್ನ ತಿರಸ್ಕಾರ ಮಾಡಿದ್ದಾರೆ. ಮಾರ್ಚ್ 3 ರ ಮುಂಜಾನೆ ನೇಣುಗಂಬಕ್ಕೇರಿಸಲು ಈಗಾಗಲೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಅದರ ಬೆನ್ನಲ್ಲೇ ಗುಪ್ತಾ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಅರ್ಜಿ ವಜಾ ಮಾಡುವ ಮೂಲಕ ಗಲ್ಲು ಶಿಕ್ಷೆ ತಪ್ಪದು ಎಂಬ ಸಂದೇಶ ರವಾನೆ ಮಾಡಿದೆ
ಗುಪ್ತಾ (25) ಗೆ ಮಾರ್ಚ್ 3ಕ್ಕೆ ಮರಣದಂಡನೆ ಶಿಕ್ಷಿ ವಿಧಿಸಲಾಗುತ್ತಿದ್ದು ಇದೇ ದಿನ ಪ್ರಕರಣದ ಇಅತ್ರೆ ಮೂವರೂ ಸಹ ಗಲ್ಲುಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಆದರೆ, ತನಗೆ ಮರಣದಂಡನೆ ವಿಧಿಸಬಾರದು ಎಂದು ಕ್ಯುರೇಟಿವ್ ಮನವಿ ಸಲ್ಲಿಸಿರುವ ಗುಪ್ತಾ ಮರಣದಂಡನೆಗೆ ಬದಲು ಜೀವಾವಧಿ ಜೈಲು ಶಿಕ್ಷೆ ವಿಧಿಸುವಂತೆ ಕೋರಿದ್ದಾನೆ. ಗುಪ್ತಾ ಪರ ವಕೀಲರಾದ ಎ ಪಿ ಸಿಂಗ್ ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರನ ಪರ ಅರ್ಜಿ ಸಲ್ಲಿಕೆ ಮಾಡಿದ್ದರು