ನವದೆಹಲಿ: ಆಯುಷ್ ವೈದ್ಯರು ಕೋವಿಡ್ -19 ಸೋಂಕು ಗುಣಪಡಿಸಲು ಔಷಧಿಗಳನ್ನು ಜಾಹೀರಾತು ನೀಡುವುದು ಅಥವಾ ಶಿಫಾರಸು ಮಾಡುವುದನ್ನು ನಿಷೇಧಿಸಿರುವ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಅರ್ಹ ಆಯುಷ್ ವೈದ್ಯರು ಮತ್ತು ಹೋಮಿಯೋಪಥಿ ವೈದ್ಯರು ಕೋವಿಡ್ -19 ರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಸರ್ಕಾರದಿಂದ ಮಾತ್ರ ಅನುಮೋದನೆ ಪಡೆದಿರುವ ಮಾತ್ರೆಗಳು ಹಾಗೂ ಪುಡಿಗಳನ್ನು ಸೂಚಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ:ಕೇಂದ್ರದ 'ಮಿಕ್ಸೋಪತಿ' ನಿರ್ಧಾರಕ್ಕೆ ಐಎಂಎ ವಿರೋಧ: 5 ಲಕ್ಷ ವೈದ್ಯರಿಂದ ಪ್ರತಿಭಟನೆ ನಿರ್ಧಾರ!
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಯುರ್ವೇದವನ್ನು ರೋಗನಿರೋಧಕ ವರ್ಧಕವಾಗಿ ಬಳಸಬಹುದು. ಆದರೆ, ಚಿಕಿತ್ಸೆಯಾಗಿ ಬಳಸಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.