ನವದೆಹಲಿ : ಪ್ರತಿಭಟನೆಯ ಹಕ್ಕು ಕುರಿತ ಮಾರ್ಗಸೂಚಿಗಳು ಮತ್ತು ಇತರೆ ನಿರ್ದೇಶನಗಳನ್ನು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ(CAA)ಯನ್ನು ವಿರೋಧಿಸಿ ಜನ ಸಮೂಹವೊಂದು ದೆಹಲಿಯ ಶಾಹೀನ್ಬಾಗ್ನಲ್ಲಿ ದೆಹಲಿ ಮತ್ತು ನೋಯ್ಡಾವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ತಡೆದು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿತ್ತು.
ಈ ಸಂಬಂಧ ಪ್ರತಿಭಟನೆ ನಡೆಸುವ ಹಕ್ಕಿನ ಸಂಬಂಧ ಮಾರ್ಗಸೂಚಿಗಳು ಮತ್ತು ಇತರ ನಿರ್ದೇಶನಗಳನ್ನು ಕೋರಿ ಹಲವಾರು ಅರ್ಜಿಗಳು ಸುಪ್ರೀಂಗೆ ಸಲ್ಲಿಕೆಯಾಗಿದ್ದವು. ಈ ಸಂಬಂಧ ಆದೇಶವನ್ನು ಘನ ನ್ಯಾಯಾಲಯ ಕಾಯ್ದಿರಿಸಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು, ಇತರ ಜನರ ಚಲನೆಯ ಹಕ್ಕಿನೊಂದಿಗೆ ಪ್ರತಿಭಟನೆಯ ಹಕ್ಕನ್ನು ಸಮತೋಲನಗೊಳಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದೆ.