ETV Bharat / bharat

ಸಾಗರೋತ್ತರ ನಾಗರಿಕರನ್ನು ಮರಳಿ ಕರೆತರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಿರಾಕರಣೆ

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು, ಸಾಗರೋತ್ತರ ನಾಗರಿಕರನ್ನು ಮರಳಿ ಕರೆತರಲು ಸಾಧ್ಯವಿಲ್ಲ ಎಂದಿದೆ. ಅವರನ್ನು ಮರಳಿ ಕರೆತರುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
author img

By

Published : Apr 21, 2020, 10:33 PM IST

ನವದೆಹಲಿ: ಇರಾನ್, ಯುಎಸ್ಎ ಸೇರಿದಂತೆ ವಿದೇಶಗಳಿಂದ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಪ್ರಯತ್ನಿಸಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು ಅವರನ್ನು ಮರಳಿ ಕರೆತರಲು ಸಾಧ್ಯವಿಲ್ಲ ಎಂದಿದೆ. ಅವರನ್ನು ಮರಳಿ ಕರೆತರುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದೆ.

ಇರಾನ್‌ನಿಂದ ಮೀನುಗಾರರನ್ನು ಮರಳಿ ಕರೆತರಬೇಕೆಂದು ಸುಪ್ರೀಂಕೋರ್ಟ್​ಗೆ ಪಿಐಎಲ್​​​ ಸಲ್ಲಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್​​ ಜನರಲ್​​ ತುಷಾರ್​​ ಮೆಹ್ತಾ ಅವರು ಇರಾನ್​ ರಾಯಭಾರ ಕಚೇರಿಯೊಂದಿಗೆ ಸರ್ಕಾರ ಸಂಪರ್ಕದಲ್ಲಿದೆ. ಅಧಿಕಾರಿಗಳು ಸುಮಾರು 1000 ಮೀನುಗಾರರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ಅವರು, "ಮೂರು ವಾರಗಳ ಹಿಂದೆ ಆಹಾರವನ್ನು ಪೂರೈಸಲು ಕಂಪನಿಗೆ ವಹಿಸಲಾಗಿತ್ತು. ಆದ್ರೆ ಕಂಪನಿ ಶುಲ್ಕವನ್ನ ಹೆಚ್ಚಿಸಿದೆ, ಅದರ ಬಿಲ್​ಗಳನ್ನು ಸಂಗ್ರಹಿಸಲಾಗಿದೆ. ಇದರಿಂದ ಅವರಿಗೆ ಹಣ ಪಾವತಿಸಲು ಅಗಿಲ್ಲ. ಹಾಗಾಗಿ ಮೀನುಗಾರರಿಗೆ ಮೂರು ವಾರಗಳಿಂದ ಸರಿಯಾದ ಆಹಾರ ದೊರೆಯುತ್ತಿಲ್ಲ ಎಂದಿದ್ದಾರೆ.

ಮೀನುಗಾರರು ದೀರ್ಘಾವಧಿಯ ವೀಸಾಗಳನ್ನು ಹೊಂದಿದ್ದಾರೆ ಮತ್ತು ಅವರನ್ನು ವಾಟ್ಸ್​ಆ್ಯಪ್​ ​ ಮೂಲಕ ಸಂಪರ್ಕಿಸಲಾಗುತ್ತಿದೆ. ಸರ್ಕಾರ ಸಹಾಯ ಮಾಡುತ್ತಿದೆ. ಏನು ಮಾಡಬಹುದೋ ಅದನ್ನು ಮಾಡಲಾಗುವುದು. ಪ್ರಪಂಚದಾದ್ಯಂತ ಪರಿಸ್ಥಿತಿ ಹದಗೆಟ್ಟಿದೆ. ಈ ವಿಷಯಗಳ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.