ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಕೋರಿ ಸಲ್ಲಿಸಿದ 140 ಮನವಿಗಳನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿದ ಹೊಸ ಅರ್ಜಿಗಳ ಕುರಿತು ಕೇಂದ್ರಕ್ಕೆ ನೋಟಿಸ್ ನೀಡಿದ್ದು, ಉತ್ತರ ನೀಡಲು 4 ವಾರಗಳ ಕಾಲಾವಶಾಶ ಕೊಟ್ಟಿದ.
![SC refuses interim stay on CAA,ಸಿಎಎ ಅನುಷ್ಠಾನಕ್ಕೆ ಸಧ್ಯಕ್ಕಿಲ್ಲ ತಡೆ](https://etvbharatimages.akamaized.net/etvbharat/prod-images/5796275_courtgfx.jpg)
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ. ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಎಎ ಅನುಷ್ಠಾನವನ್ನ ತಡೆಹಿಡಿದು, ಎನ್ಆರ್ಪಿಯನ್ನ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
-
Court hinted at setting up a five-Judge Bench to hear the case. The matter will be listed after five weeks for interim orders#SupremeCourt #supremecourtofindia #CAA #CAA2019 #CAA_NRC_NPR
— Bar & Bench (@barandbench) January 22, 2020 " class="align-text-top noRightClick twitterSection" data="
">Court hinted at setting up a five-Judge Bench to hear the case. The matter will be listed after five weeks for interim orders#SupremeCourt #supremecourtofindia #CAA #CAA2019 #CAA_NRC_NPR
— Bar & Bench (@barandbench) January 22, 2020Court hinted at setting up a five-Judge Bench to hear the case. The matter will be listed after five weeks for interim orders#SupremeCourt #supremecourtofindia #CAA #CAA2019 #CAA_NRC_NPR
— Bar & Bench (@barandbench) January 22, 2020
ಅಲ್ಲದೆ ಈ ವಿವಾದವನ್ನ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದು ಸಿಬಲ್ ಮನವಿಮಾಡಿದ್ರು. ಹಿರಿಯ ವಕೀಲ ಅಭಿಷೇಕ್ ಸಿಂಗ್ವಿ ಮಾತನಾಡಿ, ವಿಚಾರಣೆ ಆರಂಭವಾಗಿರುವುದರಿಂದ ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿ ಒಂದು ಪೀಠವನ್ನ ರಚಿಸುವಂತೆ ಮನವಿ ಮಾಡಿದರು.
ಕಪಿಲ್ ಸಿಬಲ್ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕೇಂದ್ರದ ಉತ್ತರವನ್ನ ಪಡೆಯದೆ ಸಿಎಎ ಅನುಷ್ಠಾನಕ್ಕೆ ತಡೆ ಒಡ್ಡಲು ಸಾಧ್ಯವಿಲ್ಲ ಎಂದಿದೆ.
-
Supreme Court hearing on petitions related to #CitizenshipAmendmentAct: Kapil Sibal says, Court to decide whether this case should be referred to the Constitution Bench pic.twitter.com/wQUn6Wc1Z7
— ANI (@ANI) January 22, 2020 " class="align-text-top noRightClick twitterSection" data="
">Supreme Court hearing on petitions related to #CitizenshipAmendmentAct: Kapil Sibal says, Court to decide whether this case should be referred to the Constitution Bench pic.twitter.com/wQUn6Wc1Z7
— ANI (@ANI) January 22, 2020Supreme Court hearing on petitions related to #CitizenshipAmendmentAct: Kapil Sibal says, Court to decide whether this case should be referred to the Constitution Bench pic.twitter.com/wQUn6Wc1Z7
— ANI (@ANI) January 22, 2020
ಅಸ್ಸೋಂಗೆ ಸಂಬಂಧಿಸಿದ ಮನವಿಗೆ ಉತ್ತರಿಸಲು ಕೇಂದ್ರಕ್ಕೆ ಎರಡು ವಾರಗಳ ಕಾಲ ಸಮಯಾವಾಕಾಶ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮನವಿ ಮಾಡಿದ್ರು, ಇದಕ್ಕೆ ಒಪ್ಪಿದ ಕೋರ್ಟ್ 2 ವಾರಗಳ ನಂತರ ಅಸ್ಸೋಂಗೆ ಸಂಬಂಧಿಸಿದ ವಿಚಾರವನ್ನ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ 140 ಅರ್ಜಿಗಳಿಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಕಾಲ ಸಮಯ ನೀಡಿದ ಕೋರ್ಟ್, ಸಿಎಎಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ 5 ಜನರ ಸಾಂವಿಧಾನಿಕ ಪೀಠ ರಚನೆ ಮಾಡುವ ಸೂಚನೆ ನೀಡಿದೆ. ಮಧ್ಯಂತರ ಆದೇಶ ರವಾನಿಸಲು 5 ವಾರಗಳ ನಂತರ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.