ನವದೆಹಲಿ: ಉದ್ಯೋಗ ನೇಮಕಾತಿ ವೇಳೆ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷ ಕಾರ್ಯಾಚರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್, ಈ ವಿಷಯದ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರವನ್ನು ಸಹ ಕೇಳಿಲ್ಲ. 2012ರಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್. ಆಗ ಆ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ ಎಂದರು.
ಈ ವಿಷಯವನ್ನು ಸರ್ಕಾರದ "ಉನ್ನತ ಮಟ್ಟದಲ್ಲಿ" ಚರ್ಚಿಸಲಾಗುತ್ತಿದೆ ಮತ್ತು ಈ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಳ್ಳುಲಾಗುತ್ತೆ. ಎಸ್‌ಸಿ-ಎಸ್ಟಿ ಮತ್ತು ಶೋಷಿತ ವರ್ಗಗಳ ಹಿತವನ್ನ ನಮ್ಮ ಸರ್ಕಾರ ಯಾವಾಗಲೂ ಕಾಪಾಡುತ್ತೆ ಅಂತಾ ಸಚಿವರು ಹೇಳಿದರು.
-
KC Venugopal, Congress: One of the Ministers has misled the House by saying that this situation has arrived because of the 2012 government. We will definitely move a Privilege Motion against the Minister. (file pic) https://t.co/2mgwTwqyKW pic.twitter.com/W5sbW17Lnh
— ANI (@ANI) February 10, 2020 " class="align-text-top noRightClick twitterSection" data="
">KC Venugopal, Congress: One of the Ministers has misled the House by saying that this situation has arrived because of the 2012 government. We will definitely move a Privilege Motion against the Minister. (file pic) https://t.co/2mgwTwqyKW pic.twitter.com/W5sbW17Lnh
— ANI (@ANI) February 10, 2020KC Venugopal, Congress: One of the Ministers has misled the House by saying that this situation has arrived because of the 2012 government. We will definitely move a Privilege Motion against the Minister. (file pic) https://t.co/2mgwTwqyKW pic.twitter.com/W5sbW17Lnh
— ANI (@ANI) February 10, 2020
ಸಚಿವರ ಈ ಹೇಳಿಕೆ ಖಂಡಿಸಿದ ಕಾಂಗ್ರೆಸ್ ಪಕ್ಷದ ಸದಸ್ಯರು, ಸದನದಿಂದ ಹೊರ ನಡೆದರು. ಇದೇ ವಿಚಾರ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್, 2012ರಲ್ಲಿ ಉತ್ತರಾಖಂಡ ಸರ್ಕಾರದಿಂದಾಗಿ ಈ ಪರಿಸ್ಥಿತಿ ಬಂದಿದೆ ಎಂದು ಸಚಿವರೊಬ್ಬರು ಸದನದ ದಾರಿತಪ್ಪಿಸಿದ್ದಾರೆ. ನಾವು ಖಂಡಿತವಾಗಿಯೂ ಸಚಿವರ ವಿರುದ್ಧ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದಿದ್ದಾರೆ.