ನವದೆಹಲಿ: ರಾಜಕೀಯ ವಿಡಂಬನಾತ್ಮಕ ಚಿತ್ರವೆಂದು 'ಭೋಬಿಶಯೋತರ್ ಭೂತ್' ಪ್ರದರ್ಶನದ ಮೇಲೆ ನಿಷೇಧ ಹೇರಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ, ಸುಪ್ರೀಂಕೋರ್ಟ್ ₹ 20 ಲಕ್ಷ ರೂ ದಂಡ ಪಾವತಿಸುವಂತೆ ಆದೇಶಿದೆ.
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು, ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯ ಮೇಲೆ ನಿರ್ಮಾಪಕರು ಹಾಗೂ ಚಿತ್ರ ಮಂದಿರ ಮಾಲೀಕರಿಗೆ ಪರಿಹಾರ ಮೊತ್ತವಾಗಿ ₹ 20 ಲಕ್ಷ ನೀಡುವಂತೆ ಮಮತಾ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯಾದ್ಯಂತ 40ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ 'ಭೋಬಿಶಯೋತರ್ ಭೂತ್' ಸಿನಿಮಾಕ್ಕೆ ದೀದಿ ಸರ್ಕಾರ ನಿಷೇಧ ಹೇರಿದೆ ಎಂದು ಅನಿಕ್ ದತ್ತಾ ಆಪಾದಿಸಿದರು.
ಒತ್ತಾಯಪೂರ್ವಕವಾಗಿ ಚಿತ್ರ ಪ್ರದರ್ಶನವನ್ನು ತಡೆಯಲಾಗಿದೆ ಎಂಬ ಸಿಂಗಲ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರ ದೂರು ಆಲಿಸಿದ ನ್ಯಾಯಾಲಯ, 'ಪ್ರದರ್ಶನದ ವೇಳೆ ಯಾವುದೇ ಅಡಚಣೆ ಹಾಗೂ ನಿರ್ಬಂಧ ವಿಧಿಸದಂತೆ ಖಚಿತಪಡಿಸುವಂತೆ' ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.