ನವದೆಹಲಿ: ಡೆಡ್ಲಿ ವೈರಸ್ ಕೊರೊನಾ ವಿರುದ್ಧದ ಹೋರಾಟ ಮುಂದುವರಿದಿದೆ. ಹೀಗಾಗಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಇದರ ಮಧ್ಯೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದ ದೂರುದಾರನಿಗೆ ಕೋರ್ಟ್ ಮಂಗಳಾರತಿ ಮಾಡಿದೆ.
ಸಾಮಾಜಿಕ ಅಂತರ ಎಂಬ ಪದ ಬಳಕೆ ಮಾಡುವ ಬದಲು ದೈಹಿಕ ಅಂತರ ಎಂಬ ಪದ ಬಳಕೆ ಮಾಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಕೆ ಮಾಡಿದ್ದ ಅರ್ಜಿದಾರನಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅರ್ಜಿದಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ್ರೆ ಹಾಗೂ ಹೆಚ್ಚು ಪರಿಣಾಮಕಾರಿಯಾಗಿರಬೇಕಾದ್ರೆ ಸಾಮಾಜಿಕ ಅಂತರದ ಬದಲು ದೈಹಿಕ ಅಥವಾ ವೈಯಕ್ತಿಕ ಅಂತರ ಪದ ಬಳಕೆ ಮಾಡುವಂತೆ ಅವರು ವಾದ ಮಂಡನೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಬೇಗ ಮನದಟ್ಟು ಆಗುತ್ತದೆ ಎಂದಿದ್ದರು.
ಇದರಿಂದ ಆಕ್ರೋಶಗೊಂಡ ಸುಪ್ರೀಂಕೋರ್ಟ್ ಅರ್ಜಿದಾರನ ಅರ್ಜಿ ವಜಾಗೊಳಿಸಿ, 10 ಸಾವಿರ ರೂಪಾಯಿ ದಂಡ ಕಟ್ಟುವಂತೆ ವಾರ್ನ್ ಮಾಡಿದೆ ಎಂದು ತಿಳಿದು ಬಂದಿದೆ.