ನವದೆಹಲಿ: ರಾಮಜನ್ಮಭೂಮಿಯಲ್ಲಿ ಸಿಕ್ಕ ವಸ್ತುಗಳ ಸಂರಕ್ಷಣೆ ಮಾಡುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಸುಪ್ರೀಂಕೊರ್ಟ್ನಿಂದ ವಜಾಗೊಂಡಿವೆ.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಸಿಕ್ಕಿರುವ ವಸ್ತುಗಳ ಸಂರಕ್ಷಣೆ ವಿಚಾರವಾಗಿ ಈಗಾಗಲೇ ಪಂಚ ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿದ್ದು, ಅವುಗಳನ್ನ ಸಂರಕ್ಷಣೆ ಮಾಡುವಂತೆ ತಿಳಿಸಿದೆ. ಇದೀಗ ಕ್ಷುಲಕ ಕಾರಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದರಿಂದ ಆಕ್ರೋಶಗೊಂಡಿರುವ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿ. ಆರ್ ಗವಾಯ್ ಮತ್ತು ಕೃಷ್ಣನ್ ಮುರಾರಿ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರರಿಗೆ 1 ಲಕ್ಷ ರೂ ದಂಡ ವಿಧಿಸಿದ್ದು, ಒಂದು ತಿಂಗಳೊಳಗೆ ಹಣ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸತೀಶ್ ಚಿಂದೂಜಿ ಶಂಭರ್ಕರ್ ಮತ್ತು ಡಾ. ಅಂಬೇಡ್ಕರ್ ಫೌಂಡೇಶನ್ ಅರ್ಜಿ ಸಲ್ಲಿಕೆ ಮಾಡಿತ್ತು.