ETV Bharat / bharat

SBI ಬ್ಯಾಂಕ್‌ನಿಂದ 3 ಹುತಾತ್ಮ ಸೈನಿಕರ ತಾಯಂದಿರ ಖಾತೆಗೆ ತಲಾ ₹30 ಲಕ್ಷ ಜಮಾ - Ramgarh Branch SBI Bank

ಎಸ್‌ಬಿಐ ಬ್ಯಾಂಕ್​ ಮಾರ್ಗಸೂಚಿಗಳ ಪ್ರಕಾರ, ಸೇನಾ ಸೈನಿಕರ ವೇತನ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ರೆ ಯಾವುದೇ ಅಪಘಾತದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬ್ಯಾಂಕ್ ₹30 ಲಕ್ಷ ಪರಿಹಾರದ ರೂಪದಲ್ಲಿ ನೀಡುತ್ತದೆ..

SBI Bank deposited 30 lakhs to mothers of martyrs
ಎಸ್​ಬಿಐ ಬ್ಯಾಂಕ್ ನಿಂದ ಹುತಾತ್ಮ ಸೈನಿಕರ ತಾಯಂದಿರ ಖಾತೆಗೆ 30 ಲಕ್ಷ ಹಣ ಜಮಾ
author img

By

Published : Jun 26, 2020, 7:13 PM IST

ಪಂಜಾಬ್ : ಜೂನ್ 16 ರಂದು ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದ 3 ಜವಾನರ ತಾಯಂದಿರ ಖಾತೆಗೆ ಎಸ್​ಬಿಐ ಬ್ಯಾಂಕ್ ತಲಾ ₹30 ಲಕ್ಷ ಹಣ ಜಮಾ ಮಾಡಿದೆ.​

ಪಂಜಾಬ್ ರೆಜಿಮೆಂಟ್ ಸೆಂಟರ್ ರಾಮ್‌ಗಢ​ ಕ್ಯಾಂಟ್‌ನಲ್ಲಿ ತರಬೇತಿ ಪಡೆದಿದ್ದ 3 ಜವಾನರು ಜೂನ್ 16ರಂದು ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದರು. ಈ ಮೂವರು ಹುತಾತ್ಮ ಸೈನಿಕರ ಪ್ರಧಾನ ಕಚೇರಿ ರಾಮ್‌ಗಢದ ಪಂಜಾಬ್ ರೆಜಿಮೆಂಟ್ ಕೇಂದ್ರವಾಗಿತ್ತು. ಮೂವರಿಗೂ 2019ರಲ್ಲಿ ಪಿಆರ್‌ಸಿಯಲ್ಲಿ ತರಬೇತಿ ನೀಡಲಾಗಿತ್ತು. ಅವರ ಸಂಬಳದ ಬ್ಯಾಂಕ್ ಖಾತೆಯನ್ನು ರಾಮ್‌ಗಢದ ಎಸ್‌ಬಿಐನಲ್ಲಿ ತೆರೆಯಲಾಗಿತ್ತು.

ಎಸ್‌ಬಿಐ ಬ್ಯಾಂಕ್​ ಮಾರ್ಗಸೂಚಿಗಳ ಪ್ರಕಾರ, ಸೇನಾ ಸೈನಿಕರ ವೇತನ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ರೆ ಯಾವುದೇ ಅಪಘಾತದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬ್ಯಾಂಕ್ ₹30 ಲಕ್ಷ ಪರಿಹಾರದ ರೂಪದಲ್ಲಿ ನೀಡುತ್ತದೆ. ಅದರ ಪ್ರಕಾರ ಹುತಾತ್ಮ ಮೂವರು ಸೈನಿಕರ ಕುಟುಂಬಕ್ಕೆ ಹಣ ಸೇರಬೇಕು. ಸೈನಿಕರಿಗೆ ಮದುವೆಯಾಗದ ಕಾರಣ ಮೂವರು ಸೈನಿಕರ ತಾಯಂದಿರ ಬ್ಯಾಂಕ್ ಖಾತೆಗಳಿಗೆ ₹30 ಲಕ್ಷ ಹಣ ಜಮಾ ಮಾಡಿರುವುದಾಗಿ ಎಸ್‌ಬಿಐ ರಾಮ್‌ಗಢ ಶಾಖೆಯ ಮುಖ್ಯ ವ್ಯವಸ್ಥಾಪಕ ರಾಹುಲ್ ಕುಮಾರ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.