ETV Bharat / bharat

ವಿಶೇಷ ಸಂದರ್ಶನ: ಕಾಂಗ್ರೆಸ್​ಗೆ ಬದಲಾವಣೆ ಅನಿವಾರ್ಯ ಎಂದ ಸಂಜಯ್ ಝಾ

author img

By

Published : Aug 26, 2020, 12:18 AM IST

Updated : Aug 26, 2020, 1:12 AM IST

ಬಿಜೆಪಿ ವಿರುದ್ಧ ಹೋರಾಡಲು ಹೊಸ ದೃಷ್ಟಿಕೋನ, ಮತದಾರರಿಗೆ ಸ್ಫೂರ್ತಿ ನೀಡಲು ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದು ಇತ್ತೀಚೆಗೆ ಕಾಂಗ್ರೆಸ್​ ಪಕ್ಷದಿಂದ ಅಮಾನತುಗೊಂಡ ಕಾಂಗ್ರೆಸ್‌ ಪಕ್ಷದ ಮಾಜಿ ವಕ್ತಾರ ಸಂಜಯ್ ಝಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

sanjay jha interview by Amith agnihotri
ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಅಧ್ಯಕ್ಷರ

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಬಲವಾದ ಪರ್ಯಾಯವಾಗಬಹುದಾದ ಪಕ್ಷ ಕಾಂಗ್ರೆಸ್‌, ಆದರೆ, ಪ್ರತಿಪಕ್ಷ ಕಾಂಗ್ರೆಸ್‌ ಇದೀಗ ಸಂಪೂರ್ಣ ಜಡವಾಗಿದೆ ಮತ್ತು ಭವಿಷ್ಯದ ಬಗ್ಗೆ ಹೊಸ ದೂರದೃಷ್ಟಿ ಜೊತೆಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಇದೆ ಎಂದು ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡ ಕಾಂಗ್ರೆಸ್‌ ಪಕ್ಷದ ಮಾಜಿ ವಕ್ತಾರ ಸಂಜಯ್ ಝಾ, ಹಿರಿಯ ಪತ್ರಕರ್ತ ಅಮಿತ್ ಅಗ್ನಿಹೋತ್ರಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಈ ರೀತಿ ತಿಳಿಸಿದ್ದಾರೆ.

ಕಾಂಗ್ರೆಸ್ ಯಾಕೆ ಈ ರೀತಿ ಅವ್ಯವಸ್ಥೆಯಲ್ಲಿದೆ ಎಂದು ನೀವು ಭಾವಿಸುತ್ತೀರಿ?

ಹೌದು, 2024 ರಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುವ ಸ್ಪಷ್ಟವಾದ ಧೃವೀಕೃತ ನಾಯಕ ನಮ್ಮಲ್ಲಿಲ್ಲ ಎಂಬುದು ಒಂದು ಕಾರಣ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಅನುಪಸ್ಥಿತಿಯೂ ಇದೆ, ಅದು ಎಐಸಿಸಿಯ ಪ್ರಮುಖ ರಚನೆಯನ್ನು ದುರ್ಬಲಗೊಳಿಸಿದೆ. ಯಾಕೆಂದರೆ, ಅಲ್ಲಿ ಜವಾಬ್ದಾರಿಯನ್ನು ಹೊರಬಹುದಾದ ಸರಿಯಾದ ವ್ಯಕ್ತಿ ಯಾರು ಎಂಬುದು ಅಲ್ಲಿರುವ ಜನರಿಗೆ ತಿಳಿದಿಲ್ಲ. ಸಾಂಸ್ಥಿಕ ದೌರ್ಬಲ್ಯ, ನಾಯಕತ್ವದ ಕೊರತೆ ಮತ್ತು ಪಕ್ಷದೊಳಗೆ ಒಂದು ಸೈದ್ಧಾಂತಿಕ ಗೊಂದಲವೂ ಇದೆ. ಈ ಮೂರು ಅಂಶಗಳು ಪಕ್ಷದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ನಾವು ಇನ್ನೂ ಹೆಚ್ಚಿನ ರಾಜ್ಯ ನಾಯಕರನ್ನು ಪ್ರೋತ್ಸಾಹಿಸಬೇಕು ಮತ್ತು ಪಕ್ಷವನ್ನು ಅತ್ಯದ್ಭುತ ಆಂತರಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕಾಗಿದೆ.

ಈ ಪರಿಸ್ಥಿತಿಗೆ ಯಾರು ಜವಾಬ್ದಾರರು?

ಬಂದರು (buck) ಪ್ರಾಣಿಯು ಯಾವಾಗಲೂ ಮೇಲ್ಭಾಗದಲ್ಲಿ ನಿಲ್ಲುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಈ ಸಮಸ್ಯೆ ಅಧ್ಯಕ್ಷ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯಾಗಿದೆ. ಹೀಗಾಗಿ ಒಟ್ಟಾಗಿ ಎದ್ದು ನಿಂತು ಅವರು ಪಕ್ಷದಲ್ಲಿ ಈ ದುರ್ಗತಿಗೆ ಏಕೆ ಅವಕಾಶ ನೀಡುತ್ತಿದ್ದಾರೆ ಎಂದು ನಮಗೆ ತಿಳಿಸಬೇಕು. ಪಕ್ಷದೊಳಗಿನ ಈ ದುರ್ಬಲತೆ ಬಿಜೆಪಿಯ ಕೆಲಸವನ್ನು ಬಹಳ ಸುಲಭವಾಗಿದೆ.

ನಾಯಕತ್ವದ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ನಿನ್ನೆ ಸಭೆ ಸೇರಿತ್ತು. ಆದರೆ, ಯಥಾಸ್ಥಿತಿಗೆ ಅನುಮೋದನೆ ನೀಡಿ ಸಭೆ ಅಂತ್ಯವಾಗಿದ್ದು ಏಕೆ?

23 ಹಿರಿಯ ನಾಯಕರು ಎತ್ತಿದ ಸಮಸ್ಯೆಗಳನ್ನು ಪಕ್ಷವು ನಿರ್ಲಕ್ಷಿಸಿದರೆ, ಅದು ಪಕ್ಷದಲ್ಲಿ ತನ್ನದೇ ಆದ ಗಂಡಾಂತರವನ್ನು ಸೃಷ್ಟಿಸುತ್ತದೆ. ಇವುಗಳು ಅತ್ಯಂತ ಉತ್ತಮವಾಗಿ ನಿರೂಪಿಸಲ್ಪಟ್ಟ ಶಿಫಾರಸುಗಳಾಗಿವೆ ಮತ್ತು ಹೆಚ್ಚಿನ ರಾಜಕೀಯ ಪ್ರಜ್ಞೆಯನ್ನು ಹೊಂದಿವೆ. ಈ ಶಿಫಾರಸುಗಳು ಅತ್ಯಂತ ಹಿರಿಯ ನಾಯಕರು ಮತ್ತು ಕಿರಿಯ ಮುಖಂಡರಿಂದ ಬರುತ್ತಿರುವ ಪಕ್ಷಕ್ಕೆ ಸ್ಪಷ್ಟ ಸಂದೇಶವಾಗಿದ್ದು, ನಮ್ಮನ್ನು ನಾವು ಮರುಶೋಧಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ಈಗ ಬದಲಾಗದಿದ್ದರೆ ನಾವು ನಮ್ಮದೇ ಅಂತ್ಯಕ್ಕೆ ಚರಮ ಗೀತೆ ಬರೆಯುತ್ತಿದ್ದೇವೆ ಎಂಬುದು ಸ್ಪಷ್ಟ.

ಕಾಂಗ್ರೆಸ್‌ನಲ್ಲಿ ಇಂತಹ ಭಿನ್ನಮತೀಯರು ಇದ್ದಾರೆಯೇ?

ನಾನು ಅವರನ್ನು ಭಿನ್ನಮತೀಯರು ಎಂದು ಕರೆಯುವುದಿಲ್ಲ, ನಾನು ಅವರನ್ನು ಪಕ್ಷದ ಪ್ರಜಾಪ್ರಭುತ್ವ ಧ್ವನಿಗಳು ಎಂದು ಕರೆಯುತ್ತೇನೆ. ಇವರು ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ಬದ್ಧರಾಗಿರುವವರು ಮತ್ತು ಪಕ್ಷದ ಉತ್ಸಾಹಿ ಪ್ರತಿಪಾದಕರು. ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿಯನ್ನು ಎದುರಿಸಬಲ್ಲದು ಎಂದು ಅವರು ನಂಬುತ್ತಾರೆ. ಸೋನಿಯಾಗೆ ಬರೆದ ಪತ್ರದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬೆಂಬಲಿಸುವ ಇಂತಹ 300 ಕ್ಕೂ ಹೆಚ್ಚು ನಾಯಕರು ಪಕ್ಷದಲ್ಲಿದ್ದಾರೆ.

ಹಾಗಾದರೆ, ಕಾಂಗ್ರೆಸ್ ಸಕ್ರಿಯವಾಗಿರಲು ಮಾಡಬೇಕು?

ಪಕ್ಷದ ಜೊತೆ ಪರಿವರ್ತನೆ ಪ್ರಾರಂಭಿಸಲು ತಕ್ಷಣವೇ ಸಕ್ರಿಯ ಮತ್ತು ತಳಮಟ್ಟದಲ್ಲಿ ಕೆಲಸ ಮಾಡಬಲ್ಲ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಬೇಕು. ಪ್ರಸ್ತುತ ಪಕ್ಷದ ಕಾರ್ಯಕರ್ತಕರನ್ನು ಸಜ್ಜುಗೊಳಿಸಲು ಮತ್ತು ಮತದಾರರನ್ನು ಪ್ರೇರೇಪಿಸಲು ಸಮರ್ಥನಾಗಿರುವ ಮತ್ತು ಬಿಜೆಪಿಯ ವಿರುದ್ಧ ಹೋರಾಡುವ ಉತ್ಸಾಹವನ್ನು ಹುಟ್ಟುಹಾಕುವ ಮೂಲಕ ಪಕ್ಷದ ಉನ್ನತ ಹುದ್ದೆಯ ಘನತೆ ಕಾಪಾಡಿ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ನಾಯಕ ಬೇಕು. ಪ್ರಸ್ತುತ, ನಮ್ಮ ಪಕ್ಷದ ಕಾರ್ಯಕರ್ತರು ನಿರಾಶಾವಾದಗಳಾಗಿದ್ದು, ನಿರುತ್ಸಾಹಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದ ದೂರದೃಷ್ಟಿ ನೀಡಬಲ್ಲ ನಾಯಕನ ಅವಶ್ಯಕತೆ ಇದೆ ಮತ್ತು ನಂತರ ಪಕ್ಷವು ಅಲ್ಲಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸಬೇಕಿದೆ. ಮಾಧ್ಯಮದ ಜೊತೆ, ಉದ್ಯಮದ ಜೊತೆ ಮತ್ತು ವಾಣಿಜ್ಯದೊಂದಿಗೆ ತೊಡಗಿಸಿಕೊಳ್ಳಲು, ಬುದ್ಧಿಜೀವಿಗಳೊಂದಿಗೆ ಮತ್ತು ಈ ಹಿಂದೆ ನಾವು ನಿರ್ಲಕ್ಷಿಸಿರುವ ಮಧ್ಯಮ ವರ್ಗದೊಂದಿಗೆ ತೊಡಗಿಸಿಕೊಳ್ಳಲು ಸಿದ್ಧರಿರುವ ಅನೇಕರು ಸಿದ್ಧವಿದ್ದಾರೆ.

ರಾಹುಲ್ ಗಾಂಧಿ ಶೀಘ್ರದಲ್ಲೇ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಮರಳಬಹುದು ಎಂಬ ಮಾತಿದೆ. ಅವರು ಆ ಹುದ್ದೆಗೆ ಸರಿ ಹೊಂದುತ್ತಾರೆಯೇ?

ಸರಿ, ಆದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಗೆ ಏರಲು ನಾನು ಬಯಸುವುದಿಲ್ಲ ಎಂದು ಮಿಸ್ಟರ್‌ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಬೇಕೆಂಬ ರಾಹುಲ್ ಗಾಂಧಿ ಅವರ ಅಭಿಪ್ರಾಯವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಬೆಂಬಲಿಸಿದ್ದಾರೆ. ಸೋನಿಯಾ ಗಾಂಧಿ ಕೇವಲ ಹಂಗಾಮಿ ಪಕ್ಷದ ಅಧ್ಯಕ್ಷೆ. ಆದ್ದರಿಂದ, ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯ ಅಧಿಕಾರದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದು ಗಾಂಧಿ ಕುಟುಂಬದಿಂದ ಬಂದ ಸ್ಪಷ್ಟ ಸಂದೇಶವಾಗಿದೆ. ಪಕ್ಷದ ಸಂವಿಧಾನದ ಪ್ರಕಾರ ನಡೆಯುವ ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಮೂಲಕ ಸಿಡಬ್ಲ್ಯುಸಿ ತಕ್ಷಣ ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಬೇಕು.

ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಲು ನೀವು ಕೆಲವು ಸೂಕ್ತ ಪ್ರಶ್ನೆಗಳನ್ನ ಎತ್ತಿದ್ದೀರಿ. ಆದರೆ, ಅದಕ್ಕಾಗಿಯೇ ನೀವು ಅಮಾನತುಗೊಂಡಿದ್ದೀರಿ. ಇನ್ನೂ ಪಕ್ಷಕ್ಕೆ ವಾಪಸ್‌ ಆಗುವ ಭರವಸೆ ಇದೆಯೇ?

ನಾನು ಖಂಡಿತಾ ಆಶಾವಾದಿಯಾಗಿ ಉಳಿದಿದ್ದೇನೆ. ಕಾಂಗ್ರೆಸ್‌ ಪಕ್ಷಕ್ಕೆ ಅದ್ಭುತ ರಾಜಕೀಯ ಇತಿಹಾಸವಿದೆ. ಇದರಲ್ಲಿ ಉತ್ತಮ ಪ್ರತಿಭೆ ಮತ್ತು ಸಿದ್ಧಾಂತವಿದೆ. ದುರದೃಷ್ಟವಶಾತ್, ನಾವು ಜಡ ಮತ್ತು ನಿಷ್ಕ್ರಿಯರಾಗಿದ್ದೇವೆ ಮತ್ತು ನಮ್ಮ ಕಾರ್ಯಕ್ಷಮತೆ ಮತದಾರರಿಗೆ ಸ್ಫೂರ್ತಿ ನೀಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಜನರು ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಆಗಬೇಕು ಮತ್ತು ಪಕ್ಷದಲ್ಲಿ ಯಾವುದೇ ಹೈಕಮಾಂಡ್ ಸಂಸ್ಕೃತಿ ಇರಬಾರದು. ಬಿಜೆಪಿ ವಿಭಿನ್ನ ಸಿದ್ಧಾಂತ ಮತ್ತು ಆಡಳಿತದ ಮಾದರಿಯನ್ನು ಪ್ರತಿನಿಧಿಸುತ್ತದೆ. ಬಿಜೆಪಿಯನ್ನು ಸೋಲಿಸಬಲ್ಲ ಏಕೈಕ ಪ್ರಬಲ ರಾಷ್ಟ್ರೀಯ ಪಕ್ಷವೆಂದರೆ ಅದು ಕಾಂಗ್ರೆಸ್. ಆದ್ದರಿಂದ, ಕಾಂಗ್ರೆಸ್ ಪಕ್ಷವನ್ನು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ರೂಪಿಸಬೇಕು. ಅಭಿವೃದ್ಧಿಪಡಿಸಬೇಕು. ತದ ನಂತರ ಮತ್ತೆ ಹಿಂದಿರುಗಿ ದೇಶವನ್ನ ಆಳಲು ಒಂದು ಅವಕಾಶ ನೀಡುವಂತೆ ದೇಶದ ಜನರ ಮನವೊಲಿಸಬೇಕು.

ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೆ ಪರಿಣಾಮಕಾರಿ ನಾಯಕತ್ವವನ್ನು ನೀಡಬಹುದೇ?

ನನಗೆ ಇದು ವ್ಯತ್ಯಾಸವನ್ನುಂಟು ಮಾಡುತ್ತದೆ ಅನ್ನಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶಕ್ತಿ, ಶೈಲಿ ಮತ್ತು ಕಾರ್ಯತಂತ್ರವನ್ನು ಜಾರಿಗೆ ತರುತ್ತಾನೆ. ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿರುವುದು ಹೊಸ ದೃಷ್ಟಿಕೋನ ಮತ್ತು ದೃಢವಾದ ಮಾರ್ಗಸೂಚಿ. ನೀವು ಯಾವುದೇ ವ್ಯಕ್ತಿಗೆ ಅವಕಾಶ ನೀಡದೆ, ಅವರು ಉತ್ತಮ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಅಲ್ಲ ಎಂದು ನಿಮಗೆ ಹೇಗೆ ತಿಳಿಯುತ್ತದೆ?.

-ಅಮಿತ್ ಅಗ್ನಿಹೋತ್ರಿ

Last Updated : Aug 26, 2020, 1:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.