ETV Bharat / bharat

ಮಂಗಳೂರಿನ 'ಆ ಕರಾಳ ದಿನ' ನೆನಪಿಸಿದ ಕೇರಳದ ವಿಮಾನ ದುರಂತ!

author img

By

Published : Aug 7, 2020, 11:04 PM IST

Updated : Aug 8, 2020, 12:44 AM IST

ದುಬೈನಿಂದ ಆಗಮಿಸುತ್ತಿದ್ದ ಏರ್​ ಇಂಡಿಯಾ ವಿಮಾನ ಕೇರಳದ ಕೋಯಿಕ್ಕೋಡ್​​ ವಿಮಾನ ನಿಲ್ದಾಣದಲ್ಲಿ ರನ್​ವೇಗೆ ಜಾರಿದ್ದು, ಅನೇಕರು ಸಾವನ್ನಪ್ಪಿದ್ದಾರೆ. ಈ ಘಟನೆ ಕರ್ನಾಟಕದ ಮಂಗಳೂರಿನಲ್ಲಿ ನಡೆದ ಅಪಘಾತ ನೆನಪಿಸುತ್ತಿದೆ.

Karipur Airport in Kozhikode
Karipur Airport in Kozhikode

ಹೈದರಾಬಾದ್​: ಇಂದಿನ ಕೋಯಿಕ್ಕೋಡ್ ವಿಮಾನ ದುರಂತ 2010ರಲ್ಲಿ ಮಂಗಳೂರಿನಲ್ಲಿ ನಡೆದ ದುರಂತವನ್ನು ನೆನಪಿಸುತ್ತಿದೆ. ಯಾಕಂದ್ರೆ ಮಂಗಳೂರಿನಲ್ಲೂ ಪತನಗೊಂಡಿದ್ದು ಏರ್​ಇಂಡಿಯಾ ಎಕ್ಸ್​ಪ್ರೆಸ್​ ಬೋಯಿಂಗ್​ 737 ವಿಮಾನ. ಇವತ್ತು ಪತನ ಆಗಿದ್ದೂ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಬೋಯಿಂಗ್​ 737 ವಿಮಾನ​. ಎರಡೂ ವಿಮಾನಗಳು ಬಂದಿದ್ದು ದುಬೈಯಿಂದಲೇ. ಮಂಗಳೂರಿನ ಬಜ್ಪೆಯದ್ದೂ ಟೇಬಲ್​ ಟಾಪ್​ ರನ್​ವೇ. ಕೇರಳದ ಕೋಯಿಕ್ಕೋಡ್​​ನ ಇಂಟರ್​ನ್ಯಾಶನಲ್​​ ಏರ್​ಪೋರ್ಟ್​ ಕೂಡ ಟೇಬಲ್​ ಟಾಪ್​ ರನ್​ವೇಯನ್ನೇ ಹೊಂದಿದೆ.

ಕೇರಳ ವಿಮಾನ ದುರಂತ ಘಟನೆ

ಎರಡೂ ಏರ್​ಪೋರ್ಟ್​​ಗಳ ಇಕ್ಕೆಲಗಳಲ್ಲಿ ಇರುವುದು ಆಳವಾದ ಕಣಿವೆ. ಹೀಗಾಗಿ ಇಂತಹ ಏರ್​ಪೋರ್ಟ್​ಗಳಲ್ಲಿ ವಿಮಾನ ಲ್ಯಾಂಡ್​ ಮಾಡುವಾಗ ಪೈಲೆಟ್​​ಗಳು ಬಹಳ ಚಾಕಚಕ್ಯತೆಯಿಂದ ವಿಮಾನವನ್ನು ಲ್ಯಾಂಡ್ ಮಾಡಬೇಕಾಗುತ್ತದೆ. ಇಂತಹ ಏರ್​​ಪೋರ್ಟ್​​ಗಳಲ್ಲಿ ಸ್ವಲ್ಪ ಎಡವಿದರೂ ಅಪಾಯ ಖಚಿತ. 2010ರ ಮೇ 22ರಂದು ಮಂಗಳೂರು ಏರ್​ಪೋರ್ಟ್​​ನಲ್ಲಿ 158 ಜನರನ್ನು ಬಲಿ ಪಡೆದಿದ್ದ ಭೀಕರ ದುರಂತದ ಸಮಯದಲ್ಲೇ ಕೋಯಿಕ್ಕೋಡ್​ ಏರ್​ಪೋರ್ಟ್​ ರನ್​​ವೇಯ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು.

ವಿಮಾನ ದುರಂತದಲ್ಲಿ ಪೈಲೆಟ್‌ ಸೇರಿ 16 ಮಂದಿ ದುರ್ಮರಣ; 123 ಮಂದಿಗೆ ಗಾಯ, 15 ಜನರ ಸ್ಥಿತಿ ಗಂಭೀರ

ಹೇಗಿದೆ ಕೋಯಿಕ್ಕೋಡ್​ ಏರ್​ಪೋರ್ಟ್​?

ಕೋಯಿಕ್ಕೋಡ್​​ ಏರ್​ಪೋರ್ಟ್​ನದ್ದು ಟೇಬಲ್​ಟಾಪ್​ ರನ್​ವೇ. ವಿಮಾನ ನಿಲ್ದಾಣದ ಸುತ್ತಲೂ ಸಣ್ಣಪುಟ್ಟ ಬೆಟ್ಟಗುಡ್ಡಗಳಿವೆ. ಮಂಗಳೂರು ಏರ್​ಪೋರ್ಟ್​​ನಲ್ಲಿದ್ದಂತೆ ಇಲ್ಲೂ ರನ್​​ವೇಯ ಕೊನೆಯಲ್ಲಿ ಕಣಿವೆ ಇದೆ. 9,383 ಅಡಿಗಳಷ್ಟು ಉದ್ದದ ರನ್​ವೇಯನ್ನು ಇನ್ನೂ 12 ಸಾವಿರ ಅಡಿಗಳಷ್ಟು ಉದ್ದಕ್ಕೆ ವಿಸ್ತರಿಸಬೇಕೆಂದು ತಜ್ಞರು 10 ವರ್ಷಗಳ ಹಿಂದೆಯೇ ಒತ್ತಾಯಿಸಿದ್ದರು. ಅಂದಹಾಗೆ ಮಂಗಳೂರಿನಲ್ಲೂ ದುರಂತ ನಡೆದ ನಂತರ ರನ್​ವೇಯ ಉದ್ದವನ್ನು 8000 ಅಡಿಗಳಿಂದ 9,000 ಅಡಿಗಳವರೆಗೆ ವಿಸ್ತರಿಸಲಾಗಿತ್ತು.

2019ರಲ್ಲಿ ಸ್ವಲ್ಪದರಲ್ಲೇ ತಪ್ಪಿತ್ತು ದುರಂತ!

2019ರ ಜುಲೈ1ರಂದು ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಇಂಥದ್ದೇ ದುರಂತ ಸಂಭವಿಸಿತ್ತು. ಅಂದು ಸೌದಿ ಅರೇಬಿಯಾದಿಂದ ಬಂದಿದ್ದ ಏರ್​ ಇಂಡಿಯಾ ವಿಮಾನ ಲ್ಯಾಂಡಿಂಗ್​ ವೇಳೆ ರನ್​ವೇಗೆ ಉಜ್ಜಿಕೊಂಡು ಹೋಗಿತ್ತು. ಲ್ಯಾಂಡ್​ ಆಗುತ್ತಿದ್ದಾಗ ವಿಮಾನದ ಹಿಂಬದಿ ಭಾಗ ರನ್​ವೇಗೆ ಟಚ್​ ಆಗಿತ್ತು. ಆದರೆ ಪೈಲೆಟ್​ ಸಮಯ ಪ್ರಜ್ಞೆಯಿಂದಾಗಿ ಸ್ವಲ್ಪದರಲ್ಲೇ ಅವಘಡ ತಪ್ಪಿಹೋಗಿತ್ತು. ಸೌದಿ ಅರೇಬಿಯಾದ ದಮ್ಮಂನಿಂದ ಕೋಯಿಕ್ಕೋಡ್​​ಗೆ ಏರ್​​ ಇಂಡಿಯಾ ವಿಮಾನ ಆಗಮಿಸಿತ್ತು.

Last Updated : Aug 8, 2020, 12:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.