ಚಿತ್ತೂರು: ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಎಸ್.ಆರ್ ಪುರಂ ತಾಲೂಕಿನ ಚಿನ್ನತಯ್ಯಾರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುಧಾಕರ್ ಮತ್ತು ಆತನ ಪತ್ನಿ ಸಿಂಧು ಪ್ರಿಯಾಗೆ ಇಬ್ಬರು ಹೆಣ್ಮಕ್ಕಳು. ಪದೇ ಪದೆ ಗಂಡ - ಹೆಂಡ್ತಿ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಪತ್ನಿ ಸಿಂಧು ಪ್ರಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಕಣ್ಣೆದರೇ ಹೆಂಡ್ತಿ ಮತ್ತು ಮಕ್ಕಳು ಸಾವು ನೋಡಲಾರದೇ ಗಂಡ ಸುಧಾಕರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾವಿಯಿಂದ ಮೂರು ಮೃತದೇಹಗಳನ್ನು ಹೊರ ತೆಗೆದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.