ETV Bharat / bharat

ರಾನು ಮೊಂಡಲ್​ಗೆ ಸಲ್ಮಾನ್​ ಮನೆ ಗಿಫ್ಟ್​ ನೀಡಲ್ಲ... ಇದೊಂದು ಸುಳ್ಳು ಸುದ್ದಿಯಂತೆ! - ರಾನು ಮೊಂಡಲ್​ಗೆ ಸಲ್ಮಾನ್​ ಮನೆ ಗಿಫ್ಟ್​

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ರನು ಮೊಂಡಲ್​ಗೆ ಮನೆವೊಂದನ್ನ ಸಲ್ಮಾನ್ ಖಾನ್​ ನೀಡಲಾಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಇದೀಗ ನಿಜಾಂಶ ಹೊರಬಿದ್ದಿದೆ.

ಸಲ್ಮಾನ್​ ಖಾನ್​/ರನು ಮೊಂಡಲ್​
author img

By

Published : Aug 30, 2019, 6:24 PM IST

ಮುಂಬೈ: ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ.. ಹಾಡಿನ ಒಂದು ವಿಡಿಯೋ ಮೂಲಕ ಎಲ್ಲರ ಮನಗೆದ್ದ ಬಡ ಗಾಯಕಿ ರಾನು ಮೊಂಡಲ್​ಗೆ ಬಾಲಿವುಡ್​ನ ಸುಲ್ತಾನ್​ ಸಲ್ಮಾನ್​ ಖಾನ್​ 55 ಲಕ್ಷ ರೂ ಮೌಲ್ಯದ ನಿವಾಸ ನೀಡಿದ್ದಾರೆಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. ಆದರೆ ಇದೀಗ ಅದಕ್ಕೆ ಸ್ಪಷ್ಟನೆ ಸಿಕ್ಕಿದೆ.

ಬಾಲಿವುಡ್​​ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರದ ತೇರಿ ಮೇರಿ ಕಹಾನಿ ಗೀತೆಗೆ ತಮ್ಮ ಮಧುರ ಕಂಠ ನೀಡಿದ ಬಳಿಕ ಹೆಚ್ಚು ಫೇಮಸ್​ ಆಗಿರುವ ರಾನು ಮೊಂಡಲ್​ಗೆ ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡುವುದರ ಜತೆಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರಗೊಂಡಿತ್ತು. ಆದರೆ ಅದು ಸುಳ್ಳು ಸುದ್ದಿ ಎಂಬುದು ಇದೀಗ ಗೊತ್ತಾಗಿದೆ. ಸಲ್ಮಾನ್​ ಮುಂಬೈ ನಗರದ ಹೊರಭಾಗದಲ್ಲಿರುವ ರಣಘಾಟ್​ನ ಅಮ್ರಾ ಶೋಬಾಯಿ ಕ್ಲಬ್​ನಲ್ಲಿ ಮನೆ ನೀಡಿದ್ದರು ಎಂಬ ವದಂತಿ ಹಬ್ಬಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಣಘಾಟ್​ನ ಅಮ್ರಾ ಶೋಬಾಯಿ ಕ್ಲಬ್​ನ ಸದಸ್ಯ ವಿಕ್ಕಿ ಬಿಸ್ವಾಸ್​, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸುದ್ದಿ ಸುಳ್ಳು. ಸಲ್ಮಾನ್​ ಖಾನ್​ ಅವರು ರಾನು ಮೊಂಡಲ್​ ಅವರಿಗೆ ಮನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ರಾನು ಮೊಂಡಲ್​ ಅವರ ಚೊಚ್ಚಲ ಹಾಡಿಗೆ ಹಿಮೇಶ್ ರೇಶ್ಮಿಯಾ ಅವರು 6 ರಿಂದ 7 ಲಕ್ಷ ರೂ ಸಂಭಾವನೆ ನೀಡಿದ್ದಾರೆ ಎಂದು ತಿಳಿದು ಬಂದಿತ್ತು.

Intro:Body:

ರಾನು ಮೊಂಡಲ್​ಗೆ ಸಲ್ಮಾನ್​ ಮನೆ ಗಿಫ್ಟ್​ ನೀಡಲ್ಲ... ಇದೊಂದು ಸುಳ್ಳು ಸುದ್ದಿಯಂತೆ! 

ಮುಂಬೈ: ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ.. ಹಾಡಿನ ಒಂದು ವಿಡಿಯೋ ಮೂಲಕ ಎಲ್ಲರ ಮನಗೆದ್ದ ಬಡ ಗಾಯಕಿ  ರಾನು ಮೊಂಡಲ್​ಗೆ ಬಾಲಿವುಡ್​ನ ಸುಲ್ತಾನ್​ ಸಲ್ಮಾನ್​ ಖಾನ್​ 55 ಲಕ್ಷ ರೂ ಮೌಲ್ಯದ ನಿವಾಸ ನೀಡಿದ್ದಾರೆಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. ಅದರೆ ಇದೀಗ ಅದಕ್ಕೆ ಸ್ಪಷ್ಟನೆ ಸಿಕ್ಕಿದೆ. 

ಬಾಲಿವುಡ್​​ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರದ ತೇರಿ ಮೇರಿ ಕಹಾನಿ ಗೀತೆಗೆ ತಮ್ಮ ಮಧುರ ಕಂಠ ನೀಡಿದ ಬಳಿಕ ಹೆಚ್ಚು ಫೇಮಸ್​ ಆಗಿರುವ ರಾನು ಮೊಂಡಲ್​ಗೆ  ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡುವುದರ ಜತೆಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರಗೊಂಡಿತ್ತು. ಆದರೆ ಅದು ಸುಳ್ಳು ಸುದ್ದಿ ಎಂಬುದು ಇದೀಗ ಗೊತ್ತಾಗಿದೆ. ಸಲ್ಮಾನ್​ ಮುಂಬೈ ನಗರದ ಹೊರಭಾಗದಲ್ಲಿರುವ ರಣಘಾಟ್​ನ ಅಮ್ರಾ ಶೋಬಾಯಿ ಕ್ಲಬ್​ನಲ್ಲಿ ಮನೆ ನೀಡಿದ್ದರು ಎಂದು ತಿಳಿದು ಬಂದಿತ್ತು. 

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಣಘಾಟ್​ನ ಅಮ್ರಾ ಶೋಬಾಯಿ ಕ್ಲಬ್​ನ ಸದಸ್ಯ ವಿಕ್ಕಿ ಬಿಸ್ವಾಸ್​,  ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸುದ್ದಿ ಸುಳ್ಳು. ಸಲ್ಮಾನ್​ ಖಾನ್​ ಯಾವುದೇ ರೀತಿಯ ಮನೆ ಅವರಿಗೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಇನ್ನು  ರಾನು ಮೊಂಡಲ್​ ಅವರ ಚೊಚ್ಚಲ ಹಾಡಿಗೆ ಹಿಮೇಶ್ ರೇಶ್ಮಿಯಾ ಅವರು  6 ರಿಂದ 7 ಲಕ್ಷ ರೂ ಸಂಭಾವನೆ ನೀಡಿದ್ದಾರೆ ಎಂದು ತಿಳಿದು ಬಂದಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.