ETV Bharat / bharat

ರಾಷ್ಟ್ರೀಯ ಸದ್ಭಾವನಾ ದಿನ: ಸೌಹಾರ್ದತೆಗೆ ಶ್ರಮಿಸಿದ ರಾಜೀವ್​ ಗಾಂಧಿ ಬಗ್ಗೆ ಒಂದಿಷ್ಟು ಮಾಹಿತಿ - former Prime Minister Rajiv Gandhi

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮರಣಾರ್ಥ 1992 ರಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸ್ಥಾಪಿಸಿತು. ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು 10 ಲಕ್ಷ ರೂ.ಗಳ ನಗದು ಬಹುಮಾನ, ಸನ್ಮಾನ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಮಾಜಿ ಪ್ರಧಾನಿ ರಾಜೀವ್ ಗಾಂಧಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ
author img

By

Published : Aug 20, 2020, 8:01 AM IST

ಹೈದರಾಬಾದ್: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲು ರಾಷ್ಟ್ರೀಯ ಸದ್ಭಾವನಾ ದಿನವನ್ನು ಪ್ರತಿ ವರ್ಷ ಆಗಸ್ಟ್ 20 ರಂದು ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳ ಭಾರತೀಯರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಣೆಗೆ ತರಲಾಗಿದೆ.

ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ವಿಶೇಷವಾಗಿ ಶ್ರಮಿಸಿದರು. ಅವರ ಈ ಕಾರ್ಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ಆಗಸ್ಟ್​ 20 ಅನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ಅಂದಿನ ಕಾಂಗ್ರೆಸ್‌ ಸರ್ಕಾರವು ನಿರ್ಧರಿಸಿತು. ಸದ್ಭಾವನಾ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ರಾಜೀವ್ ಗಾಂಧಿಯವರ ಬಗ್ಗೆ 10 ಕುತೂಹಲಕಾರಿ ಸಂಗತಿಗಳು:

  • ರಾಜೀವ್ ಗಾಂಧಿ ಅವರ ಅಜ್ಜ ಕಮಲಾ ನೆಹರೂ ಅವರಿಗೆ ಗೌರವ ಸಲ್ಲಿಸಲು ಅವರನ್ನು ರಾಜೀವ್ ಎಂದು ಹೆಸರಿಸಲಾಯಿತು. 'ಕಮಲಾ' ಎಂಬ ಪದವು ಲಕ್ಷ್ಮಿ ದೇವಿಯನ್ನು ಸೂಚಿಸುತ್ತದೆ ಮತ್ತು 'ರಾಜೀವ್' ಕಮಲದ ಸಮಾನಾರ್ಥಕ ಪದವಾಗಿದೆ. ಕಮಲವನ್ನು ಲಕ್ಷ್ಮಿ ದೇವಿಯನ್ನು ಪೂಜಿಸಲು ಬಳಸಲಾಗುತ್ತದೆ.
  • ಅವರು ಫ್ಲೈಯಿಂಗ್ ಕ್ಲಬ್‌ನ ಸದಸ್ಯರಾಗಿದ್ದರು. ಅಲ್ಲಿ ಅವರು ನಾಗರಿಕ ವಿಮಾನಯಾನದಲ್ಲಿ ತರಬೇತಿ ಪಡೆದರು.
  • ಅವರು 1970 ರಲ್ಲಿ ಏರ್ ಇಂಡಿಯಾಗೆ ಸೇರಿದರು. 1980 ರಲ್ಲಿ ರಾಜಕೀಯಕ್ಕೆ ಬರುವವರೆಗೂ ಅಲ್ಲಿಯೇ ಕಾರ್ಯ ನಿರ್ವಹಿಸಿದರು.
  • ಅವರು ಕಂಪ್ಯೂಟರ್ ಮತ್ತು ಗ್ಯಾಜೆಟ್‌ಗಳತ್ತ ಹೆಚ್ಚಿನ ಒಲವನ್ನು ಹೊಂದಿದ್ದರು. ಸಚಿವರಾಗಿ ಅವರು ದೇಶದೊಳಗೆ ಡಿಜಿಟಲೀಕರಣದ ಪ್ರಗತಿಯನ್ನು ಒತ್ತಿ ಹೇಳಿದರು.
  • ಅವರು 1981 ರಲ್ಲಿ ಕಾಂಗ್ರೆಸ್ಸಿನ ಯುವ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದರು.
  • ಇಲ್ಲಿಯವರೆಗೆ ಅವರು ದೇಶದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 40 ನೇ ವಯಸ್ಸಿನಲ್ಲಿ ದೇಶದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದರು.
  • ಅವರ ನಾಯಕತ್ವದಲ್ಲಿಯೇ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಅತಿದೊಡ್ಡ ಬಹುಮತವನ್ನು ಗಳಿಸಿತು. 542 ರಲ್ಲಿ 411 ಸ್ಥಾನಗಳನ್ನು ಗಳಿಸಿದೆ.
  • ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದಾಗಿ ಅವರಿಗೆ ಮಿಸ್ಟರ್ ಕ್ಲೀನ್ ಎಂದು ಸಂಬೋಧಿಸಲಾಯಿತು.
  • ಮೇ 1991 ರಲ್ಲಿ, ಇಂದಿರಾ ಗಾಂಧಿಯವರ ಪ್ರತಿಮೆಗೆ ಹೂಮಾಲೆ ಹಾಕಲು ಅವರು ತಮಿಳುನಾಡಿನ ಶ್ರೀಪೆರುಂಬುದುರ್​ಗೆ ತೆರಳಿದ್ದರು. ಈ ಸಮಾರಂಭದಲ್ಲಿ ಶ್ರೀಲಂಕಾದ ಪ್ರತ್ಯೇಕತಾವಾದಿ ಸಂಘಟನೆಯಾದ ಎಲ್‌ಟಿಟಿಇ ಅವರನ್ನು ಹತ್ಯೆಗೈಯಿತು.

ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮರಣಾರ್ಥ 1992 ರಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸ್ಥಾಪಿಸಿತು. ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು 10 ಲಕ್ಷ ರೂ.ಗಳ ನಗದು ಬಹುಮಾನ, ಸನ್ಮಾನ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ.

ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಭಾಜನರು: ಜಗನ್ ನಾಥ್ ಕೌಲ್, ಲತಾ ಮಂಗೇಶ್ಕರ್, ಸುನಿಲ್ ದತ್, ಕಪಿಲಾ ವತ್ಸ್ಯಾನನ್, ಎಸ್.ಎನ್.ಸುಬ್ಬ ರಾವ್, ಸ್ವಾಮಿ ಅಗ್ನಿವೇಶ್, ನಿರ್ಮಲಾ ದೇಶಪಾಂಡೆ, ಹೇಮ್ ದತ್ತಾ, ಎನ್.ರಾಧಾಕೃಷ್ಣನ್, ಗೌತಮ್ ಭಾಯ್, ಸ್ಪೈಕಾ ಅಮ್ಜದ್ ಅಲಿ ಖಾನ್, ಮುಜಾಫರ್ ಅಲಿ, ಶುಭಾ ಮುಡ್ಗಲ್, ಮೊಹಮ್ಮದ್ ಅಜರುದ್ದೀನ್, ಎಂ.ಗೋಪಾಲ ಕೃಷ್ಣ, ಗೋಪಾಲಕೃಷ್ಣ ಗಾಂಧಿ, ಮುಂತಾದವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಸದ್ಭಾವನಾ ದಿವಸ್ ಪ್ರತಿಜ್ಞೆ: ಜಾತಿ, ಪ್ರದೇಶ, ಧರ್ಮ ಅಥವಾ ಭಾಷೆಯನ್ನು ಲೆಕ್ಕಿಸದೆ ಭಾರತದ ಎಲ್ಲ ಜನರ ಭಾವನಾತ್ಮಕ ಏಕತೆ ಮತ್ತು ಸಾಮರಸ್ಯಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ನಾನು ತೆಗೆದುಕೊಳ್ಳುತ್ತೇನೆ. ಹಿಂಸಾಚಾರ ಮಾಡದೆ, ಮಾತುಕತೆ ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ನಮ್ಮ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತೇನೆ ಎಂದು ರಾಷ್ಟ್ರೀಯ ಸದ್ಭಾವನಾ ದಿನದಂದು ಪ್ರತಿಜ್ಞೆ ಮಾಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.