ETV Bharat / bharat

'ಇವಿಎಂ ಸರ್ಕಾರ ದೇಶ ಆಳುತ್ತಿದೆ': ಜತೇದಾರ್‌ ಹೇಳಿಕೆಗೆ ಬಿಜೆಪಿ-ಅಕಾಲಿ ದಳ ನಡುವೆ ಕಿತ್ತಾಟ - ಇವಿಎಂ ಸರ್ಕಾರ ದೇಶ ಆಳುತ್ತಿದೆ ಎಂದ ಜತೇದಾರ್

ಖಲೀಸ್ತಾನ ಚಳವಳಿ ಮುಖಂಡ ಅಕಾಲ್ ತಖ್ತ್ ಜತೇದಾರ್ ಅಮೃತಸರದಲ್ಲಿ ಮಂಗಳವಾರ ನಡೆದ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿಯ 100ನೇ ಪ್ರತಿಷ್ಠಾನ ದಿನದಂದು ಮಾತನಾಡಿ, ಇವಿಎಂ ಸರ್ಕಾರ ದೇಶವನ್ನು ಆಳುತ್ತಿದೆ ಎಂದು ಹೇಳಿಕೆ ನೀಡಿದ್ದರು.

SAD, BJP
ಎಸ್​ಎಡಿ ವರ್ಸಸ್​ ಬಿಜೆಪಿ
author img

By

Published : Nov 18, 2020, 10:33 PM IST

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಬಗ್ಗೆ ಅಕಲ್ ತಖ್ತ್ ಜತೇದರ್ ಹೇಳಿಕೆಗೆ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಡುವೆ ವಾಗ್ದಾಳಿ ಶುರುವಾಗಿದೆ.

ಖಲೀಸ್ತಾನ ಚಳವಳಿ ಮುಖಂಡ ಅಕಾಲ್ ತಖ್ತ್ ಜತೇದಾರ್ ಅಮೃತಸರದಲ್ಲಿ ಮಂಗಳವಾರ ನಡೆದ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿಯ 100ನೇ ಪ್ರತಿಷ್ಠಾನ ದಿನದಂದು ಮಾತನಾಡಿ, ಇವಿಎಂ ಸರ್ಕಾರ ದೇಶವನ್ನು ಆಳುತ್ತಿದೆ ಎಂದಿದ್ದರು.

ಅಲ್ಲದೆ ಇದು ಕೇಂದ್ರದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವಲ್ಲ. ಇದು ಇವಿಎಂ ಚುನಾಯಿತ ಸರ್ಕಾರ. ಈ ಇವಿಎಂ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಉಳಿಯಲಿದೆ ಎಂಬುದು ನಮಗೆ ತಿಳಿದಿಲ್ಲ. ಆದ್ದರಿಂದ ಸಣ್ಣ ವ್ಯತ್ಯಾಸಗಳನ್ನು ಮರೆತು ಒಂದು ವೇದಿಕೆಯಲ್ಲಿ ನಾವು ಬಂದು ಒಂದಾಗುವುದು ಅತ್ಯಗತ್ಯ ಎಂದಿದ್ದರು.

ಬಿಜೆಪಿಯ ಹಿರಿಯ ಮುಖಂಡ ಹರ್ಜೀತ್ ಸಿಂಗ್ ಗ್ರೆವಾಲ್, ಜತೇದಾರ್‌ ಅವರನ್ನು ರಾಜಕೀಯ ಕುಟುಂಬದ ಉದ್ಯೋಗಿ. ಅವರೊಬ್ಬ ಮಾನಸಿಕ ಅಸ್ವಸ್ಥ. ಜತೇದಾರ್‌ಗೆ ರಾಜಕೀಯ ಹೇಳಿಕೆಗಳನ್ನು ನೀಡುವ ಅಥವಾ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಇವಿಎಂ ಸರ್ಕಾರ ಎಂದು ಕರೆಯುವ ನೈತಿಕತೆ ಇಲ್ಲ ಎಂದಿದ್ದಾರೆ.

ಬಿಜೆಪಿಯ ಹೇಳಿಕೆಯನ್ನು ಶಿರೋಮಣಿ ಅಕಾಲಿ ದಳ ಖಂಡಿಸಿದೆ. ಸಿಖ್ಖರ ತಾತ್ಕಾಲಿಕ ಸ್ಥಾನದ ಮೇಲೆ ಅಪಾಯಕಾರಿ ಮತ್ತು ಅಭೂತಪೂರ್ವ ದಾಳಿ ನಡೆಸಲಾಗುತ್ತಿದೆ. ಪ್ರಚೋದನಕಾರಿ ಹೇಳಿಕೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಹಾನಿಯಾಗಬಹುದು ಎಂದು ಎಸ್ಎಡಿ ವಕ್ತಾರ ಡಾ. ಡಾಲ್ಜೀತ್ ಸಿಂಗ್ ಚೀಮಾ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್‌ಡಿಎಯಿಂದ ಹೊರ ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.