ಅಹಮದಾಬಾದ್ (ಗುಜರಾತ್): ಫೆ.24ರಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕೈಯಿಂದ ತಯಾರಿಸಿದ ಖಾದಿ ಸ್ಮಾರಕಗಳು ಮತ್ತು ಚರಕ ಉಡುಗೊರೆಯಾಗಿ ನೀಡಲು ಸಬರಮತಿ ಆಶ್ರಮದ ಆಡಳಿತ ಮಂಡಳಿ ಮುಂದಾಗಿದೆ.
ಈ ಕುರಿತು ಆಶ್ರಮದ ನಿರ್ದೇಶಕ ಅತುಲ್ ಪಾಂಡ್ಯ ಮಾತನಾಡಿದ್ದು, 'ನಾವು ಕೆಲ ಖಾದಿ ವಸ್ತುಗಳು, ರೇಖಾಚಿತ್ರಗಳು, ಚರಕ (ನೂಲುವ ಚಕ್ರ), ಸ್ಮಾರಕಗಳನ್ನು ಟ್ರಂಪ್ ದಂಪತಿಗೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಗಣ್ಯರ ಭೇಟಿಗೂ ಒಂದು ದಿನ ಮುಂಚಿತವಾಗಿ ಈ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಗಣ್ಯರನ್ನು ಸ್ವಾಗತಿಸುವ ಸಿದ್ಧತೆಗಳು ಆಶ್ರಮದಲ್ಲಿ ಭರದಿಂದ ಸಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.