ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಹಾಗು 12 ಸದಸ್ಯರನ್ನು ಒಳಗೊಂಡ ಟ್ರಂಪ್ ನಿಯೋಗ ಇಂದು ಭಾರತಕ್ಕೆ ಭೇಟಿ ನೀಡಲಿದೆ. ಈ ಹಿನ್ನೆಲೆ ಇವರಿಗೆ ಸೂಕ್ತ ಭದ್ರತೆ ಒದಗಿಸುವ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
1865 ರಲ್ಲಿ ಸ್ಥಾಪನೆಯಾದ ವಿಶ್ವದ ಅತ್ಯಂತ ಹಳೆಯ ಅಮೆರಿಕದ ತನಿಖಾ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಗುಪ್ತಚರ ಸಂಸ್ಥೆ (ಎಫ್ ಬಿಎ), ಸುಮಾರು ನೂರು ವರ್ಷಗಳಿಂದಲೂ ದಿನದ 24 ಗಂಟೆಯೂ ಅಮೆರಿಕ ಅಧ್ಯಕ್ಷರ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.
ಅಮೆರಿಕ ಅಧ್ಯಕ್ಷರ ಆಡಳಿತ ಕಚೇರಿಯಾದ ವಾಷಿಂಗ್ಟನ್ನ ಶ್ವೇತಭವನ, ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆ ನಡೆಯುವ ಕೊಠಡಿ ಹಾಗು ಖಜಾನೆಯ ರಕ್ಷಣೆಗಾಗಿ ,ಈ ತನಿಖಾ ಸಂಸ್ಥೆಯು ಸುಮಾರು 3,200 ವಿಶೇಷ ಏಜೆಂಟ್ಗಳು ಮತ್ತು 1,300 ಸಮವಸ್ತ್ರಧರಿಸಿರುವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಈ ಏಜೆನ್ಸಿಯ ಒಂದು ಶಾಖೆಯು ಅಮೆರಿಕ ಅಧ್ಯಕ್ಷರು ಮತ್ತು ಅವರ ಕುಟುಂಬದ ಸದಸ್ಯರನ್ನು ಕಾಪಾಡುವ ಜವಾಬ್ದಾರಿ ಹೊಂದಿದೆ.
ಟ್ರಂಪ್ ಆಗಮನದ ದಿನಾಂಕ ನಿಗದಿಗೂ ಮೊದಲೇ ವಿವಿಧ ಸೆಕ್ಯೂರಿಟಿ ಏಜೆನ್ಸಿಗಳು ಭಾರತ ಪ್ರವಾಸ ಕೈಗೊಳ್ಳಲಿರುವ ನಿಯೋಗಕ್ಕೆ ಏಜೆಂಟ್ಗಳ ಮಾಹಿತಿ ಕಳಿಸಿರುತ್ತವೆ. ಕೆಲವು ರಹಸ್ಯ ಕಾರ್ಯಾಚರಣೆ ನಡೆಸುವ ಏಜೆನ್ಸಿಗಳು ತಿಂಗಳು ಮುಂಚಿತವಾಗಿಯೇ ತಮ್ಮ ವ್ಯವಸ್ಥಿತಿ ತಂತ್ರ ರೂಪಿಸಿ , ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತವೆ.
ಅಮೆರಿಕ ಅಧ್ಯಕ್ಷರು ಬೇರೆ ದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಸೆಕ್ಯೂರಿಟಿ ಏಜೆನ್ಸಿಗಳು ಅವರ ವಿಮಾನ ಸಂಚರಿಸುವ ವಾಯು ಮಾರ್ಗವನ್ನು ಅಧ್ಯಯನ ಮಾಡಿ, ಸಂಚರಿಸುವ ವೇಳೆ ಯಾವುದೇ ವಿಮಾನಗಳು ಓಡಾಡದಂತೆ ಎಚ್ಚರಿಕೆ ವಹಿಸುತ್ತಾರೆ. ಮೋಟಾರ್ ಕೇಡ್ ವಿಭಾಗವು ಟ್ರಂಪ್ ಅವರು ಹೋಗುವ ದಾರಿಯಲ್ಲಿ ದಾಳಿ ನಡೆದರೆ ಸಮೀಪವಿರುವ ಆಸ್ಪತ್ರೆ, ಇತರೆ ಸುರಕ್ಷಿತ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ.
ಏರ್ಪೋರ್ಟ್ಗೆ ಆಗಮಿಸಿದ ನಂತರ ಸುಮಾರು 20 ಏಜೆನ್ಸಿ ವಾಹನಗಳು ಅಧ್ಯಕ್ಷರು ಪ್ರಯಾಣಿಸುವ ವಾಹನದ ಹಿಂದೆ ಮುಂದೆ ಚಲಿಸುತ್ತವೆ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತೆ.
ಸೀಕ್ರೆಟ್ ಸೇವೆಯ ಏಜೆಂಟ್ಗಳು ಬಹುತೇಕ ಎಲ್ಲಾ ಸಮಯದಲ್ಲೂ ಭದ್ರತೆಗಾಗಿ ಅಧ್ಯಕ್ಷರ ಸುತ್ತವೇ ಇರುತ್ತಾರೆ, ಆದರೆ ಕೆಲವೊಮ್ಮೆ ಸಾರ್ವಜನಿಕ ಸಮಾರಂಭಗಳಲ್ಲಿ ಸ್ಥಳೀಯ ಪೊಲೀಸರು ಈ ಭದ್ರತೆ ಒದಗಿಸುತ್ತಾರೆ.