ಚೆನ್ನೈ: ಸಂಗೀತ ದಿಗ್ಗಜ, ಭಾರತೀಯ ಚಿತ್ರರಂಗ ಕಂಡಿರುವ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ(74) ಅವರು ಇಂದು ನಿಧನರಾಗಿದ್ದು, ಅವರ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿದಿದೆ.
ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅವರ ತೋಟದ ಮನೆಯಲ್ಲಿ ಸಕಲ ವಿಧಿ-ವಿಧಾನಗಳ ಮೂಲಕ ನಾಳೆ ಅಂತ್ಯಕ್ರಿಯೆ ನೆರವೇರಲಿದೆ.
ಎಂಜಿಎಂ ಆಸ್ಪತ್ರೆಯಿಂದ ಎಸ್ಪಿಬಿ ಪಾರ್ಥಿವ ಶರೀರವನ್ನ ಈಗಾಗಲೇ ಮನೆಗೆ ತರಲಾಗಿದ್ದು, ಸಂಪ್ರದಾಯದಂತೆ ವಿಧಿ-ವಿಧಾನ ನಡೆಸಲಾಗುತ್ತಿದೆ. ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಅನೇಕ ನಟರು ಎಸ್ಪಿಬಿ ನಿವಾಸದತ್ತ ತೆರಳಿ ಅಗಲಿದ ಗಾನ ಗಾರುಡಿಗನ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.