ಮಾಸ್ಕೊ (ರಷ್ಯಾ): ಮಹಾಮಾರಿ ಕೊರೊನಾ ವೈರಸ್‌ಗೆ ಕಡಿವಾಣ ಹಾಕುವಲ್ಲಿ ರಷ್ಯಾ ಒಂದು ಹೆಜ್ಜೆ ಮುಂದೆ ಸಾಗಿದೆ. ಕೋವಿಡ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಆ ದೇಶ ಪಾತ್ರವಾಗಿದೆ. ಈ ಕುರಿತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.
-
#BREAKING | Putin announces registration of Russia's first COVID-19 vaccine https://t.co/DQIKcVd0xr#SputnikBreaking pic.twitter.com/kHPQcYSAGu
— Sputnik (@SputnikInt) August 11, 2020 " class="align-text-top noRightClick twitterSection" data="
">#BREAKING | Putin announces registration of Russia's first COVID-19 vaccine https://t.co/DQIKcVd0xr#SputnikBreaking pic.twitter.com/kHPQcYSAGu
— Sputnik (@SputnikInt) August 11, 2020#BREAKING | Putin announces registration of Russia's first COVID-19 vaccine https://t.co/DQIKcVd0xr#SputnikBreaking pic.twitter.com/kHPQcYSAGu
— Sputnik (@SputnikInt) August 11, 2020
ಸರ್ಕಾರಿ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಇಂದು ಬೆಳಗ್ಗೆ ಕೊರೊನಾ ವೈರಸ್‌ಗೆ ಲಸಿಕೆ ನೋಂದಾವಣೆಗೊಂಡಿದ್ದು, ಬಹುಶಃ ಇದು ವಿಶ್ವದಲ್ಲೇ ಮೊದಲು ಎಂದಿದ್ದಾರೆ.
ಭವಿಷ್ಯದಲ್ಲಿ ಈ ಲಸಿಕೆಯನ್ನು ಇನ್ನಷ್ಟು ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ಈ ಲಸಿಕೆಯ ಅವಶ್ಯಕತೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಪುಟಿನ್ ಮಗಳಿಗೆ ಲಸಿಕೆ:
ಈ ಲಸಿಕೆಯನ್ನು ತನ್ನ ಮಗಳಿಗೆ ನೀಡಲಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಲಸಿಕೆ ಸಂಶೋಧನೆಯ ಭಾಗವಾಗಿದ್ದ ನನ್ನ ಮಗಳ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಲಸಿಕೆ ತೆಗೆದುಕೊಂಡ ಒಂದು ದಿನದ ಬಳಿಕ 37 ಡಿಗ್ರಿ ತಲುಪಿತ್ತು ಎಂದಿದ್ದಾರೆ.
ಈ ಔಷಧಿಯನ್ನು ಗಾಮಾಲೇಯಾದಲ್ಲಿನ ಮೈಕ್ರೋ ಬಯೋಲಜಿ ರಿಸರ್ಚ್ ಸೆಂಟರ್ ನೋಂದಾಯಿಸಿದ್ದು, ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂಬುದು ಈಗಾಗಲೇ ದೃಢವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಮಿಕೈಲ್ ಮುರಸ್ಕೊ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ತಿಂಗಳಿನಿಂದ ಉತ್ಪಾದನೆ:
ಪ್ರಪಂಚದಲ್ಲೇ ಮೊದಲ ದೇಶವಾಗಿ ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿದಿದ್ದು, ಈಗಾಗಲೇ ಕ್ಲಿನಿಕಲ್ ಟ್ರಯಲ್ (ಮನುಷ್ಯನ ಮೇಲಿನ ಪ್ರಯೋಗ) ಯಶಸ್ವಿಯಾಗಿದೆ. ಹೀಗಾಗಿ ಲಸಿಕೆಯ ನೋಂದಣಿ ಕಾರ್ಯ ಪೂರ್ಣಗೊಳಿಸಿದೆ. ಅಕ್ಟೋಬರ್ ತಿಂಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾಮೂಹಿಕವಾಗಿ ಲಸಿಕೆ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.