ETV Bharat / bharat

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದ ರೂಪಾಯಿ... ಡಾಲರ್​ ಎದುರು 65 ಪೈಸೆ ಕುಸಿತ!

author img

By

Published : Mar 6, 2020, 10:53 AM IST

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ದಾಖಲೆಯ ಮೌಲ್ಯ ಕಳೆದುಕೊಂಡು 74 ರೂಗೆ ತಲುಪಿದೆ.

Rupee slides 65 paise against USD
Rupee slides 65 paise against USD

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ದಾಖಲೆಯ ಮೌಲ್ಯ ಕಳೆದುಕೊಂಡು 74 ರೂಗೆ ತಲುಪಿದೆ.

ಕೊರೊನಾ ವೈರಸ್​ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಯಾಗಿವೆ. ಇದು ಭಾರತದ ರೂಪಾಯಿ ಮೇಲೆಯೂ ಪರಿಣಾಮ ಬೀರಿದ್ದು, ಡಾಲರ್​ ಎದುರು ಮಂಡಿಯೂರಿದೆ. ನಿನ್ನೆ 73.33 ರೂ.ನಲ್ಲಿ ವಹಿವಾಟು ನಡೆಸುತ್ತಿತ್ತು. ಇಂದು ಇದು 73.99 ರೂ.ಗೆ ಜಿಗಿತ ಕಂಡಿದೆ.

ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಮತ್ತೆ 1450 ಅಂಕ ಇಳಿಕೆ ಕಂಡ ಸೂಚ್ಯಂಕ

ಇನ್ನು ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್​ ಸಹ 0.25 ಅಂಶ ಕುಸಿತ ಕಂಡಿದೆ. ಕೊರೊನಾ ವೈರಸ್​​​ ಆರ್ಥಿಕ ಬೆಳವಣಿಗೆಗಳ ಮೇಲೆ ಭಾರಿ ಪ್ರಭಾವ ಬೀರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.