ತಿರುಪುರ (ತಮಿಳುನಾಡು) : ಈಡೇರಿಸೋದಕ್ಕೆ ಸಾಧ್ಯವೋ ಇಲ್ವೋ.. ಆದರೆ, ಕಲರ್ ಕಲರ್ ಭರವಸೆಗಳನ್ನ ಮತದಾರರಿಗೆ ಕೊಡ್ಬೇಕು. ಗೆದ್ರೇ ಏನೋ ಒಂದು ಸುಳ್ಳು ಹೇಳ್ಕೊಂಡು ಕಾಲ ಕಳೆದರಾಯಿತು ಅನ್ನೋದು ಈಗಿನ ರಾಜಕಾರಣಿಗಳ ಮನಸ್ಥಿತಿ. ತಮಿಳುನಾಡಿನಲ್ಲೊಬ್ಬ ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆಯ ಅಂಶಗಳನ್ನ ಕೇಳಿದ್ರೇ ನೀವು ನಗದೇ ಇರಲು ಚಾನ್ಸೇ ಇಲ್ಲ.
ಇದು ಎಲೆಕ್ಷನ್ ಸೀಸನ್. ಅಭ್ಯರ್ಥಿಗಳು, ಪಕ್ಷಗಳಿಂದ ದೊಡ್ಡ ದೊಡ್ಡ ಭರವಸೆಗಳನ್ನ ನೀಡಲಾಗುತ್ತಿದೆ. ಈ ರೀತಿಯ ಭರವಸೆಗಳೇ ವೋಟ್ ಗಿಟ್ಟಿಸಲು ಈಗಿನ ಮಾನದಂಡ. ಗೆಲ್ಲೋದಕ್ಕಾಗಿ ನಿತ್ಯ ಒಂದಿಲ್ಲಾ ಒಂದು ಡ್ರಾಮಾ ಮಾಡೋ ರಾಜಕಾರಿಗಳು ಕಣ್ಮುಂದೇ ಕಾಣ್ತಾರೆ. 15 ಲಕ್ಷ ರೂ. ನಿಮ್ಮ ಅಕೌಂಟ್‌ಗೇ ಹಾಕ್ತೀವಿ. ₹ 72 ಸಾವಿರ Nyay ಕೊಡ್ತೀವಿ ಅನ್ನೋ ಭರವಸೆಗಳು ಕಾಮನ್. ಆದರೆ, ತಮಿಳುನಾಡಿನಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ತುಂಬಾ ಡಿಫರೆಂಟಾಗಿ ಭರವಸೆ ನೀಡಿದ್ದಾರೆ.
ಈರೋಡ್ ಜಿಲ್ಲೆ ಅಂಥಿಯೂರು ನಿವಾಸಿ ಎ.ಎಂ ಶೇಖ್ ದಾವೂದ್, ತಿರುಪುರ ಸಂಸತ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಕ್ಷೇತರನಾಗಿ ಸ್ಪರ್ಧಿಸಿ ಗೆಲ್ಲೋದು ಕಷ್ಟ ಅಂತಾ ತಿಳಿದಿದ್ದರೂ ಅದನ್ನ ಎದುರಿಸಿ ಗೆಲ್ಲಲು 55ರ ಹರೆಯದ ಎ.ಎಂ ಶೇಖ್ ಪಣತೊಟ್ಟಿದ್ದಾರೆ. ವೃತ್ತಿಯಿಂದ ಟೇಲರಾಗಿರುವ ಶೇಖ್, ಚುನಾವಣೆಯಲ್ಲಿ ಗೆದ್ದು ಸಂಸದನಾದರೆ, ಪ್ರತಿ ಕುಟುಂಬಕ್ಕೂ 10 ಲೀಟರ್ ಮದ್ಯ ಫ್ರೀಯಾಗಿ ಕೊಡ್ತಾರಂತೆ. ಅಷ್ಟೇ ಅಲ್ಲ, ಪ್ರತಿ ಮನೆಯ ಗೃಹಿಣಿಗೂ ಪ್ರತಿ ತಿಂಗಳೂ ₹ 25 ಸಾವಿರ. ಜತೆ ನವವಿವಾಹಿತರಿಗೆ 10 ಲಕ್ಷ ಮತ್ತು 10-ಸೊವ್ರೆನ್ ಬಂಗಾರ ನೀಡ್ತೇನೆ ಅಂತಾ ಭರ್ಜರಿಯಾಗಿ ಭರವಸೆಗಳನ್ನ ನೀಡಿದ್ದಾರೆ.
'ನನ್ನ ಪ್ರಣಾಳಿಕೆಯಲ್ಲಿ 15 ಮುಖ್ಯ ಅಂಶಗಳಿವೆ. ಇವು ನೇರವಾಗಿ ಜನರಿಗೆ ತಲುಪುತ್ತವೆ. ಈಗ ತಿರುಪುರ ಜಿಲ್ಲೆಯಲ್ಲಿ ರೈತರಿಗೆ ಜಲಮೂಲಗಳು ಬತ್ತಿರೋದು ದೊಡ್ಡ ಸಮಸ್ಯೆ. ಸೇಲಂ ಜಿಲ್ಲೆಯಿಂದ ತಿರುಪುರ ಜಿಲ್ಲೆಯವರೆಗೂ ಮೆಟ್ಟೂರು ಡ್ಯಾಮ್‌ನಿಂದ ನೀರು ಹರಿಸಲು ಕಾಲುವೆಗಳನ್ನ ಮತ್ತಷ್ಟು ಅಭಿವೃದ್ಧಿಪಡಿಸ್ತೇನೆ. ಇದಷ್ಟೇ ಅಲ್ಲ, ಚುನಾವಣೆಯಲ್ಲಿ ಗೆಲ್ಲಿಸಿದ್ರೇ, ಕೊನೆಯ ಉಸಿರಿರುವವರೆಗೂ ಜನರ ಸೇವೆ ಮಾಡೋದಾಗಿ' ಪಕ್ಷೇತರ ಅಭ್ಯರ್ಥಿ ಶೇಖ್ ದಾವೂದ್ ಭರವಸೆ ನೀಡಿದ್ದಾರೆ.
ಶೇಖ್ ಭರವಸೆಗಳನ್ನ ಕೇಳಿ ಮತ ಹಾಕಿ ಗೆಲ್ಲಿಸಿದ್ರೇ, ಆ ಮೇಲೆ ಪ್ರತಿ ಮನೆಯಲ್ಲೂ ಹೆಣ್ಣು-ಗಂಡು ಶೇಕ್ ಶೇಕ್ ಅಂತಾ ಬಾಡಿ ಶೇಕ್ ಮಾಡ್ಕೊಂಡು ತೂರಾಡೋದಂತೂ ತಪ್ಪಲ್ಲ.