ETV Bharat / bharat

ಕೊರೊನಾ ವೈರಸ್ ಮತ್ತು ಭಾರತದ ಬಡವರ ದುಃಸ್ಥಿತಿ - ವೈರಸ್‌ ಪರೀಕ್ಷೆ

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮೋದಿ ಸರ್ಕಾರವು ಮೂರು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ್ದು, ಸಾಂಕ್ರಾಮಿಕ ರೋಗಶಾಸ್ತ್ರದ ತರ್ಕದಿಂದಾಗಿ ಇದನ್ನು ಬೆಂಬಲಿಸುವುದು ಸಹಜ. ಆದರೆ, ಈ ಲಾಕ್‌ಡೌನ್‌ ಕಾರ್ಯಗತಗೊಳಿಸುವಿಕೆ ಮಾತ್ರ ಖಂಡಿತ ಚರ್ಚೆಗೆ ಒಳಗಾಗಬೇಕಾದ ಸಂಗತಿಯಾಗಿದೆ. ಒಂದು ದೊಡ್ಡ ಸಮಸ್ಯೆಯೆಂದರೆ, ಸರ್ಕಾರದ ಮುನ್ನೆಚ್ಚರಿಕೆಯ ಕೊರತೆಯೊಂದಿಗೆ ಲಾಕ್‌ಡೌನ್‌ ಘೋಷಿಸಿರುವುದು.

ಬಡವರ ದುಃಸ್ಥಿತಿ
ಬಡವರ ದುಃಸ್ಥಿತಿ
author img

By

Published : Apr 1, 2020, 6:01 PM IST

ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಮೋದಿ ಸರ್ಕಾರವು ಮೂರು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ್ದು, ಸಾಂಕ್ರಾಮಿಕ ರೋಗಶಾಸ್ತ್ರದ ತರ್ಕದಿಂದಾಗಿ ಇದನ್ನು ಬೆಂಬಲಿಸುವುದು ಸಹಜ. ಆದರೆ ಈ ಲಾಕ್‌ಡೌನ್‌ ಕಾರ್ಯಗತಗೊಳಿಸುವಿಕೆ ಮಾತ್ರ ಖಂಡಿತ ಚರ್ಚೆಗೆ ಒಳಗಾಗಬೇಕಾದ ಸಂಗತಿಯಾಗಿದೆ. ಒಂದು ದೊಡ್ಡ ಸಮಸ್ಯೆಯೆಂದರೆ, ಸರ್ಕಾರದ ಮುನ್ನೆಚ್ಚರಿಕೆಯ ಕೊರತೆಯೊಂದಿಗೆ ಲಾಕ್‌ಡೌನ್‌ ಘೋಷಿಸಿರುವುದು. ಇದರ ಪರಿಣಾಮವಾಗಿ ದೊಡ್ಡ ನಗರಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಮರಳುವಂತಾಗಿದ್ದು, ಈ ಪ್ರಯಾಣದಲ್ಲಿ ಅನೇಕರು ಹಲವು ಬಗೆಯ ಸಂಕಷ್ಟಕ್ಕೆ ಸಿಲುಕಿದರು.

ಸರಿಯಾದ ಸಾರಿಗೆ ಸೌಕರ್ಯವಿಲ್ಲದೆ ನೂರಾರು ಕಿಲೋಮೀಟರ್‌ ನಡೆದರು, ರಾಜ್ಯ ಗಡಿಯಲ್ಲಿ ಸಿಕ್ಕಿಹಾಕಿಕೊಂಡರು. ಒಟ್ಟಾರೆ ಸಂಪೂರ್ಣ ಅವ್ಯವಸ್ಥೆಗೆ ಈ ಮುನ್ನೆಚ್ಚರಿಕೆ ಇಲ್ಲದ ಲಾಕ್‌ಡೌನ್‌ ಕಾರಣವಾಗಿದೆ. ಹಾದಿಯಲ್ಲಿ ಹಸಿದು, ಪೋಲಿಸರ ಏಟುತಿಂದು ತಮ್ಮ ಊರು ಸೇರಿದ ದೈನಂದಿನ ವೇತನದಲ್ಲಿ ಜೀವನ ಸಾಗಿಸುವ ಬಡವರು ಮೂರು ವಾರಗಳ ಲಾಕ್‌ಡೌನ್‌ನಿಂದ ಹೇಗೆ ಬದುಕುಳಿಯುತ್ತಾರೆ ಎಂಬುದರ ಕುರಿತು ಯಾವುದೇ ಆಲೋಚನೆ ನೀಡಲಾಗಿಲ್ಲ. ಬದಲಾಗಿ, ಲಾಕ್‌ಡೌನ್ ಪ್ರಾರಂಭವಾದ ಕೆಲವು ದಿನಗಳ ನಂತರ ಅವರ ದುಃಸ್ಥಿತಿಯನ್ನು ನಿವಾರಿಸುವ ಪ್ಯಾಕೇಜ್ ಅನ್ನು ಘೋಷಿಸಲಾಯಿತು. ಉತ್ತಮವಾಗಿ ರೂಪಿಸಲಾದ ಯೋಜನೆಯು ಲಾಕ್‌ಡೌನ್ ಘೋಷಿಸುವ ಮೊದಲು ಬಡವರಿಗೆ ರಕ್ಷಣೆ ನೀಡುತ್ತದೆ. ಕರೋನವೈರಸ್ ವಿರುದ್ಧದ ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸಲು ಈ ಉದ್ಯಮವು ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ಸಮಯದಲ್ಲಿ ವೈದ್ಯಕೀಯ ಸಾಧನಗಳನ್ನು ತಯಾರಿಸುವುದು ಸೇರಿದಂತೆ ಎಲ್ಲಾ ಕಾರ್ಖಾನೆಗಳ ಮುಚ್ಚುವಿರುವುದು ಮುನ್ಸೂಚನೆಯ ಕೊರತೆಗೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.

ಪರಿಣಾಮಕಾರಿಯಾದ ಸಾಮಾಜಿಕ ದೂರವುಳಿಯುವಿಕೆಯು (ಲಾಕ್‌ಡೌನ್ ಅದರಿಂದ ತೀವ್ರ ಸ್ವರೂಪ ತಳೆದಿದೆ) ಕರೋನವೈರಸ್ ಹರಡುವುದನ್ನು ನಿಧಾನಗೊಳಿಸುತ್ತದೆ ಎಂಬುದಕ್ಕೆ ಇತರ ದೇಶಗಳಿಂದ ಸಾಕಷ್ಟು ಪುರಾವೆಗಳಿವೆ. ಮತ್ತು ಅದರ ಅನುಷ್ಠಾನದ ಕೊರತೆಗಳ ಹೊರತಾಗಿಯೂ, ಲಾಕ್ಡೌನ್ ಭಾರತದಲ್ಲಿ ಕರೋನವೈರಸ್ ಹರಡುವುದನ್ನು ನಿಧಾನಗೊಳಿಸುತ್ತದೆ. ಆದಾಗ್ಯೂ, ಮೂರು ವಾರಗಳ ಲಾಕ್‌ಡೌನ್ ಸ್ವತಃ ವೈರಸ್‌ನ್ನು ನಿರ್ನಾಮ ಮಾಡುತ್ತದೆ ಎಂದು ಭಾವಿಸುವುದು ಮೂರ್ಖತನ. ಲಾಕ್‌ಡೌನ್ ತೆಗೆದುಕೊಳ್ಳುವ ಹೆಚ್ಚುವರಿ ಸಮಯವನ್ನು ವೈರಸ್‌ ಪರೀಕ್ಷೆ, ಸಂಪರ್ಕ-ಪತ್ತೆಹಚ್ಚುವಿಕೆ, ಪ್ರತ್ಯೇಕತೆ ಮತ್ತು ವೈದ್ಯಕೀಯ ಆರೈಕೆ (ವೆಂಟಿಲೇಟರ್ ಸ್ವಾಧೀನ, ಹೆಚ್ಚು ಐಸಿಯು ಹಾಸಿಗೆಗಳು ಮತ್ತು ಕಡಿಮೆ ನಿರ್ಣಾಯಕ ರೋಗಿಗಳಿಗೆ ಹೆಚ್ಚು ಐಸಿಯು ಅಲ್ಲದ ಹಾಸಿಗೆಗಳು) ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಬೇಕು.

ಎಲ್ಲಾ ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿಗಳಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು. ಏಕೆಂದರೆ ಅವರು ಕರೋನವೈರಸ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯ ಸೈನಿಕರು. ಅಲ್ಲದೆ, ಸಾಮಾನ್ಯ ಜನರಿಗೆ ಮಾಸ್ಕ್‌ಗಳ ಪರಿಣಾಮಕಾರಿತ್ವದ ಕುರಿತು ಕೆಲವು ಮಿಶ್ರ ಸಂದೇಶಗಳಂತಲ್ಲದೆ (ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌ಗಳ ಸೀಮಿತ ಪೂರೈಕೆ ಮಾಡುವ ಇರಾದೆಯೂ ಸೇರಿದಂತೆ), ಎಲ್ಲರಿಗೂ ಸಾಕಷ್ಟು ಮಾಸ್ಕ್‌ಗಳನ್ನು ಪೂರೈಸುವುದು ಎಲ್ಲರನ್ನೂ ರಕ್ಷಿಸುತ್ತದೆ. ಪ್ರತಿಯೊಬ್ಬರನ್ನು ಪರೀಕ್ಷಿಸುವುದು ಅಸಾಧ್ಯ ಮತ್ತು ಸೋಂಕಿನ ಲಕ್ಷಣಗಳಿಲ್ಲದ ಜನರಿಗೆ ಸಹ ವೈರಸ್ ಅನ್ನು ಹರಡಬಹುದು. ಹೀಗಾಗಿ ಪೂರ್ವ ಏಷ್ಯಾದ ಹೆಚ್ಚಿನ ಭಾಗಗಳಲ್ಲಿರುವಂತೆ ನಮ್ಮಲ್ಲಿಯೂ ಎಲ್ಲರೂ ಸಾರ್ವಜನಿಕವಾಗಿ ಮಾಸ್ಕ್‌ಗಳನ್ನು ಧರಿಸಿದರೆ ಎಲ್ಲರೂ ಕರೋನಾ ಸೋಂಕಿನಿಂದ ರಕ್ಷಿಸಲ್ಪಡುತ್ತಾರೆ.

ಭಾರತದಲ್ಲಿ ಪ್ರಸ್ತುತದ ಲಾಕ್‌ಡೌನ್‌ನ ಮತ್ತು ಭವಿಷ್ಯದ ಲಾಕ್‌ಡೌನ್‌ಗಳ ಆರ್ಥಿಕ ಪರಿಣಾಮ, ಸನ್ನಿವೇಶಗಳು ದೊಡ್ಡದಾಗಿರಲಿವೆ. ಬಡವರು ಇದರ ಪ್ರಮಾಣದಲ್ಲಿ ಹೆಚ್ಚಿನ ಹೊರೆ ಹೊರುತ್ತಾರೆ. ಆದಾಗ್ಯೂ, ಕರೋನವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡಿದರೆ ಬಡವರಿಗೆ ರೋಗ ಹೆಚ್ಚುತಿತ್ತು ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿರುತ್ತಿತ್ತು. ಹೀಗಾಗಿ ಲಾಕ್‌ಡೌನ್‌ ಅನ್ನು ಆರ್ಥಿಕ ಆಯಾಮದಿಂದ ವಿಶ್ಲೇಷಿಸುವುದು ಸೂಕ್ತವಲ್ಲ. ಭಾರತದಲ್ಲಿನ ಬಡವರು ಆರೋಗ್ಯಕರವಲ್ಲದ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಹೆಚ್ಚಿನ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಹೀಗಾಗಿ ಕರೋನಾ ಪರೀಕ್ಷೆಗೆ ಅಥವಾ ಚಿಕಿತ್ಸೆಯ ವೆಚ್ಚವನ್ನು ಅವರು ಭರಿಸುವುದು ಕಷ್ಟದ ಸಂಗತಿ. ಖಾಸಗಿ ಪ್ರಯೋಗಾಲಯಗಳು ಪರೀಕ್ಷೆಗೆ ಹಲವಾರು ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತವೆ ಎಂಬ ವರದಿಗಳಿವೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಪರೀಕ್ಷೆ ಮತ್ತು ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಸಂಪೂರ್ಣವಾಗಿ ಭರಿಸಬೇಕು, ಇದರಿಂದಾಗಿ ಅವರು ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷಿಸಲು ಪ್ರೋತ್ಸಾಹಿಸಿದಂತಾಗುತ್ತದೆ. ಅವರ ಇಕ್ಕಟ್ಟಾದ ಜೀವನ ವ್ಯವಸ್ಥೆಯನ್ನು ಗಮನಿಸಿದರೆ, ಮನೆಯಲ್ಲಿ ಪ್ರತ್ಯೇಕತೆವಾಗಿರುವುದು ಬಡವರಿಗೆ ವಾಸ್ತವಿಕ ಆಯ್ಕೆಯಾಗಿಲ್ಲ, ಸರ್ಕಾರವು ಪರ್ಯಾಯ ವ್ಯವಸ್ಥೆಗಳನ್ನು ಮಾಡುವುದು ಕಡ್ಡಾಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಕೋವಿಡ್ -19 ರ ಗಂಭೀರ ಪ್ರಕರಣಗಳಲ್ಲಿ ಉಲ್ಬಣವುಂಟಾದಾಗ ಮತ್ತು ಆರೋಗ್ಯ ವ್ಯವಸ್ಥೆಯು ವಿಪರೀತವಾದಾಗ, ಇಟಲಿ, ಸ್ಪೇನ್, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ (ನಿರ್ದಿಷ್ಟವಾಗಿ ನ್ಯೂಯಾರ್ಕ್ ರಾಜ್ಯ) ದಲ್ಲಿ ಈಗಾಗಲೇ ಸಂಭವಿಸಿದಂತೆ, ಆರೋಗ್ಯ ರಕ್ಷಣೆಯು ಪಡಿತರ ವ್ಯವಸ್ಥೆಯಂತಾಗುತ್ತದೆ. ಈಗ ತಿಳಿದಿರುವಂತೆ, ಇಟಲಿಯ ವೈದ್ಯರು ಹಲವಾರು ರೋಗಿಗಳೊಂದಿಗೆ ಸೀಮಿತ ಆಸ್ಪತ್ರೆ ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತಿರುವಾಗ ಯಾರನ್ನು ಉಳಿಸಬೇಕೆಂಬ ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಯಿತು. ಹೆಚ್ಚು ಸಂಭಾವ್ಯ ಜೀವಿತಾವಧಿಯ ರೋಗಿಗಳಿಗೆ ಆದ್ಯತೆ ನೀಡುವ ನೈತಿಕ ಮಾರ್ಗಸೂಚಿಯನ್ನು ಅವರು ಅನುಸರಿಸಿದರು, ಇದರರ್ಥ ಕಿರಿಯ / ಆರೋಗ್ಯವಂತ ರೋಗಿಗಳನ್ನು ಉಳಿಸುವುದು. ಭಾರತದಲ್ಲಿನ ನೆಲದ ವಾಸ್ತವತೆಗಳ ಬಗ್ಗೆ ತಿಳಿದಿರುವ ಯಾರಿಗಾದರೂ, ಅಂತಹ ಪರಿಸ್ಥಿತಿಯಲ್ಲಿ ವೈದ್ಯರು ಯಾರು ಉಳಿಸುವ ಸಾಧ್ಯತೆಯಿದೆ ಎಂದು ಊಹಿಸುವುದು ಸುಲಭ. ಶ್ರೀಮಂತ 75 ವರ್ಷದ ಪುರುಷ ಮತ್ತು ಬಡ 30 ವರ್ಷದ ಮಹಿಳೆಯ ನಡುವೆ, ಶ್ರೀಮಂತನಿಗೆ ವೈದ್ಯಕೀಯ ಆದ್ಯತೆ ದೊರೆಯುವ ಅಪಾಯವಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಬಡವರ ಬದುಕು ಶ್ರೀಮಂತವಾಗಿದೆ!

ಅಂತಹ ಸಂದರ್ಭಗಳನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಂತಹ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಸ್ಪಷ್ಟವಾದ ನೈತಿಕ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು, ಇದರಿಂದಾಗಿ ವೈಯಕ್ತಿಕ ವೈದ್ಯರಿಗೆ ಇದೇ ರೀತಿಯ ಸಂದರ್ಭಗಳಲ್ಲಿ ಅನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸನ್ನಿವೇಶ ಎದುರಾಗುವುದಿಲ್ಲ. ರೋಗಿಗಳ ಕುಟುಂಬಗಳಿಂದ ಹೆಚ್ಚಿನ ಒತ್ತಡದೊಂದಿಗೆ, ಕೆಲಸದಿಂದಲೇ ತೀವ್ರ ಒತ್ತಡಕ್ಕೆ ಒಳಗಾಗಲಿರುವ ವೈದ್ಯರಿಗೆ ಮತ್ತು ಆಸ್ಪತ್ರೆಯ ನಿರ್ವಾಹಕರಿಗೆ ಈ ಮಾರ್ಗಸೂಚಿಗಳು ಸಹಾಯ ಮಾಡುತ್ತದೆ. ಆರೋಗ್ಯ ರಕ್ಷಣೆಯನ್ನು ಪಡಿತರಗೊಳಿಸಿದಾಗ, ಬಡವರು ಸರತಿಯ ಕೊನೆಯಲ್ಲಿರುತ್ತಾರೆ. ಪಾವತಿಸುವ ಸಾಮರ್ಥ್ಯದ ಆಧಾರದ ಮೇಲೆ ಯಾವ ರೋಗಿಗಳು ವೆಂಟಿಲೇಟರ್ ಅನ್ನು ಹಾಕಬೇಕೆಂದು ವೈದ್ಯರು ಮತ್ತು ಆಸ್ಪತ್ರೆಗಳು ನಿರ್ಧರಿಸಲಿದ್ದು, ನಮ್ಮ ನಿರ್ಧಾರ ಕೊನೆಯ ವಿಷಯವಾಗಿರುತ್ತದೆ. ಹೀಗಾಗಿ ಆರೋಗ್ಯ ಸೇವೆಯ ತುರ್ತು ಅಗತ್ಯವಿರುವ ಸಂದರ್ಭಗಳಲ್ಲಿ ಆರೈಕೆಗೆ ಹೇಗೆ ಆದ್ಯತೆ ನೀಡಬೇಕು ಎಂಬುದರ ಕುರಿತು ಕಟ್ಟುನಿಟ್ಟಾದ ನೈತಿಕ ಮಾರ್ಗಸೂಚಿಗಳನ್ನು ಸ್ಥಾಪಿಸಲು ಸರ್ಕಾರವು ಈ ಮೂರು ವಾರಗಳ ಲಾಕ್‌ಡೌನ್ ಅನ್ನು ಬಳಸುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.