ಬಾಗ್ದಾದ್: ಇರಾಕ್ನ ಮೇಲೆ ಇರಾನ್ ಮತ್ತೆ ದಾಳಿ ಮಾಡಿದೆ. . ಅಮೆರಿಕವನ್ನು ಗುರಿಯಾಗಿಸಿ ಇರಾಕ್ನ ರಾಜಧಾನಿ ಬಾಗ್ದಾದ್ನ ಹಸಿರು ವಲಯದ ಮೇಲೆ ಎರಡು ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಇಲ್ಲಿನ ವಿದೇಶಗಳ ರಾಯಭಾರ ಕಚೇರಿಗಳು, ಸರ್ಕಾರಿ ಇಲಾಖೆಗಳನ್ನು ಗುರಿಯಾಗಿಸಿ ದಾಳಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದ್ದು ಪೊಲೀಸರು ಹಾಗೂ ಮಿಲಿಟರಿ ಬೀಡುಬಿಟ್ಟಿದೆ. ಘಟನೆಗೆ ಪ್ರತಿಕ್ರಿಯೆ ನೀಡಿರುವ ಇರಾಕ್ನ ಸೇನಾ ವಕ್ತಾರರು ''ಎರಡು ಕತ್ಯೂಷಾ ಕ್ಷಿಪಣಿಗಳು ಬಾಗ್ದಾದ್ನ ಹಸಿರು ವಲಯದ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಯಾವುದೇ ಪ್ರಮುಖ ಹಾನಿಯೂ ಕೂಡಾ ಜರುಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಇರಾಕ್ಲ್ಲಿರುವ ಅಮೆರಿಕಾ ಸೇನಾ ನೆಲೆಗಳಾದ ಅಲ್ ಅಸಾದ್ ಹಾಗೂ ಇಬ್ರಿಲ್ ಮೇಲೆ ದಾಳಿ ನಡೆಸಿದ್ದ ಇರಾನ್ 24 ಗಂಟೆಯೊಳಗೆ ಮತ್ತೊಂದು ದಾಳಿ ನಡೆಸಿದೆ. ಈ ಘಟನೆ ಎರಡೂ ದೇಶಗಳ ನಡುವಿನ ಯುದ್ಧದ ತೀವ್ರತೆಯನ್ನು ಬಿಂಬಿಸುತ್ತಿದೆ. ಅಮೆರಿಕಾದ ಎಚ್ಚರಿಕೆಯನ್ನು ಇರಾನ್ ನಿರ್ಲಕ್ಷಿದೆಯಾ? ಎಂದು ಅನುಮಾನವನ್ನು ಮೂಡಿಸುತ್ತಿದೆ.