ಬ್ಯಾಂಕಾಕ್ (ಥಾಯ್ಲೆಂಡ್): ಬ್ಯಾಂಕಾಕ್ನ ಸೆಂಟ್ರಲ್ ವರ್ಲ್ಡ್ ಮಾಲ್‌ನಲ್ಲಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಮಾಲ್‌ನಲ್ಲಿ ಕೊರೊನಾ ವೈರಸ್ ತಡೆಯುವ ಸಲುವಾಗಿ ಈ ರೋಬೋಟ್‌ಗಳನ್ನು ಬಳಸಲಾಗುತ್ತಿದೆ.
ಥಾಯ್ಲೆಂಡ್ ದೇಶವು ತನ್ನ ಶಾಪಿಂಗ್ ಮಾಲ್‌ಗಳನ್ನು ಮತ್ತೆ ತೆರೆಯುತ್ತಿದೆ. ಈ ಸ್ಥಳಗಳನ್ನು ಸುರಕ್ಷಿತವಾಗಿಡಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಮಾಲ್ಗೆ ಪ್ರವೇಶಿಸುವ ಮೊದಲು ವ್ಯಕ್ತಿಯ ದೇಹದ ತಾಪಮಾನವನ್ನು ಪರೀಕ್ಷಿಸಲು ಮತ್ತು ಅಲ್ಟ್ರಾ ವೈಲೆಟ್ ಲೈಟ್ ಬಳಸಿ ಎಸ್ಕಲೇಟರ್ ಮೂಲಕ ಕೈ ಸ್ವಚ್ಛಗೊಳಿಸಲು ಈ ರೋಬೋಟ್‌ಗಳನ್ನು ಬಳಸಲಾಗುತ್ತಿದೆ.
'ಪಿಪಿ' ಇದು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಸಂದೇಶಗಳನ್ನು ನೀಡುತ್ತದೆ. ಹ್ಯಾಂಡ್ ಜೆಲ್ ವಿತರಕಗಳಂತಹ ಸೌಲಭ್ಯಗಳನ್ನು ಹುಡುಕಲು ಜನರಿಗೆ ಸಹಾಯ ಮಾಡುವ 'ಲೈವ್ ಇಂಟೆಲಿಜೆಂಟ್ ಸರ್ವಿಸ್ ಅಸಿಸ್ಟೆಂಟ್' ಅನ್ನು ಸೂಚಿಸುವ 'ಲಿಸಾ' ಇದೆ. 'ಆರ್‌ಒಸಿ' ಅಥವಾ 'ರೋಬೋಟ್ ಫಾರ್ ಕೇರ್' 37.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶವನ್ನು ಇದು ಸ್ಕ್ಯಾನ್ ಮಾಡುತ್ತದೆ. ಅಂತಿಮವಾಗಿ 'ಕೆ 9' ಮಾಲ್‌ನ ಹಿಂಭಾಗದಲ್ಲಿದ್ದು, ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಯೊಂದಿಗೆ ತಿರುಗುತ್ತದೆ.
ಈ ಬ್ಯಾಟರಿ ಚಾಲಿತ ಕಾರ್ಮಿಕರು ಪ್ರಸ್ತುತ ಮಾಲ್‌ನ ನೆಲಮಹಡಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. 5 ಜಿ ತಂತ್ರಜ್ಞಾನದೊಂದಿಗೆ ಇವು ಕಾರ್ಯನಿರ್ವಹಿಸುತ್ತಿವೆ.
ಸೆಂಟ್ರಲ್ ಪಟ್ಟಾನ ಮಾಲ್ ಗುಂಪಿನ ಡೆಪ್ಯೂಟಿ ಸಿಇಒ ಪ್ರಕಾರ, ಕೋವಿಡ್-19 ನಂತರ ಶಾಪರ್‌ಗಳು ಇದನ್ನು ಬಳಸಬಹುದಾಗಿದೆ. ಇದು ಥಾಯ್ಲೆಂಡ್ ನಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರವಾಗಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ವಲ್ಲಯ ಚಿರತಿವತ್ ಹೇಳುತ್ತಾರೆ.
ಮಾಲ್‌ನಲ್ಲಿ ರೋಬೋಟ್‌ಗಳನ್ನು ಬಳಸುವುದರ ಹಿಂದಿನ ಉದ್ದೇಶವೆಂದರೆ ಸಾಮಾಜಿಕ ಅಂತರ ಮತ್ತು ನೈರ್ಮಲ್ಯದ ಬಗ್ಗೆ ಸಂದೇಶಗಳನ್ನು ನೀಡುವುದು. ತಂತ್ರಜ್ಞಾನವು ದೈನಂದಿನ ಜೀವನದಲ್ಲಿ ನಿಜವಾಗಿಯೂ ಪರಿಣಾಮ ಬೀರಬಹುದು ಎಂದು ಇಂದು ಜನರಿಗೆ ಅರಿವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಭನುಬಂಧ್ ಹೇಳುತ್ತಾರೆ.