ETV Bharat / bharat

ಆಂಧ್ರದ ಪೂರ್ವ ಗೋದಾವರಿಯಲ್ಲಿ ಭೀಕರ ರಸ್ತೆ ಅಪಘಾತ.. ಚಿತ್ರದುರ್ಗ ಮೂಲದ 7 ಮಂದಿ ಸಾವು! - ಭೀಕರ ರಸ್ತೆ ಅಪಘಾತದಲ್ಲಿ ಚಿತ್ರದುರ್ಗ ಮೂಲದ 8 ಜನ ಸಾವು

ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟಕ್ಕೆ ಟೆಂಪೋ ಟ್ರಾವೆಲರ್​​ ಅಪ್ಪಳಿಸಿ ಬಸ್​ ಕಣಿವೆಗೆ ಬಿದ್ದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮತ್ತೊಬ್ಬನೂ ಸೇರಿ ಒಟ್ಟು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಮೃತರನ್ನ ಕರ್ನಾಟಕದ ಚಿತ್ರದುರ್ಗ ಮೂಲದವರೆಂದು ಗುರುತಿಸಲಾಗಿದೆ. ಮೃತರು ಪ್ರವಾಸಿ ಬಸ್​ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದೆ.

ಆಂಧ್ರದ ಪೂರ್ವ ಗೋದಾವರಿಯಲ್ಲಿ ಭೀಕರ ರಸ್ತೆ ಅಪಘಾತ
author img

By

Published : Oct 15, 2019, 4:23 PM IST

Updated : Oct 15, 2019, 5:02 PM IST

ಪೂರ್ವ ಗೋದಾವರಿ (ಆಂಧ್ರ ಪ್ರದೇಶ): ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟಕ್ಕೆ ಟೆಂಪೋ ಟ್ರಾವೆಲರ್​​ ಅಪ್ಪಳಿಸಿ ಬಸ್​ ಕಣಿವೆಗೆ ಬಿದ್ದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಈವರೆಗೂ ಒಟ್ಟು ಏಳು ಜನ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭಿಸಿದೆ.

ಆಂಧ್ರದ ಪೂರ್ವ ಗೋದಾವರಿಯಲ್ಲಿ ಭೀಕರ ರಸ್ತೆ ಅಪಘಾತ

ಪ್ರವಾಸಿ ಬಸ್​ನಲ್ಲಿ ಹೋಗಿದ್ದವರು ಚಿತ್ರದುರ್ಗ ಮೂಲದವರೆಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಹೊರಟಿದ್ದ ಬಸ್​, ಭದ್ರಾಚಲಂನಿಂದ ರಾಜಮಂಡ್ರಿಗೆ ಹೋಗುವ ಮಾರ್ಗ ಮಧ್ಯದ ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟದ ಬಳಿ ಕಣಿವೆಗೆ ಉರುಳಿದೆ.

ಟೆಂಪೋ ಟ್ರಾವೆಲರ್​ನಲ್ಲಿ ಒಟ್ಟು 24 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನುಳಿದವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Intro:Body:

accident

Conclusion:
Last Updated : Oct 15, 2019, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.