ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ತಮಗೆ ವಸತಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ)ಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಧನ್ಯವಾದ ಅರ್ಪಿಸಿದ್ದಾರೆ.
ಗುರುದ್ವಾರ ನಿರ್ವಹಣಾ ಸಮಿತಿಯು ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸುಮಾರು 200 ವೈದ್ಯರು ಮತ್ತು ದಾದಿಯರಿಗೆ ಆಶ್ರಯ ನೀಡಿದೆ.
ವಿಶ್ವ ದಾದಿಯರ ದಿನದಂದು ರಕಾಬ್ ಗಂಜ್ ಸಾಹಿಬ್ ಗುರುದ್ವಾರದನಲ್ಲಿ ನಡೆದ ಸಮಾರಂಭದಲ್ಲಿ ಲೋಹಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.
ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದ ಕೆಲ ವೈದ್ಯಕೀಯ ಸಿಬ್ಬಂದಿಗೆ ಮನೆ ಬಿಟ್ಟು ಹೊರ ಹೋಗುವಂತೆ ಹೇಳಲಾಗಿತ್ತು. ಆದರೆ ಡಿಎಸ್‌ಜಿಎಂಸಿ ವೈದ್ಯಕೀಯ ಸಿಬ್ಬಂದಿಗೆ ವಸತಿ ಒದಗಿಸಿತು. ವೈದ್ಯಕೀಯ ಸಿಬ್ಬಂದಿಗೆ ನಾವು ಋಣಿಯಾಗಿದ್ದೇವೆ ಎಂದು ಡಿಎಸ್‌ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.