ಪಾಟ್ನಾ: ಮತಯಂತ್ರಗಳ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ, ಆರ್ಎಲ್ಎಸ್ಪಿ ನಾಯಕ ಉಪೇಂದ್ರ ಕುಶ್ವಾಹ ವಿವಾದಾದ್ಮತಕ ಹೇಳಿಕೆ ನೀಡಿದ್ದಾರೆ.
ಈ ಚುನಾವಣೆ ಫಲಿತಾಂಶದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದ್ದೇ ಆದಲ್ಲಿ ರಸ್ತೆಗಳಲ್ಲಿ ರಕ್ತ ಹರಿಯುವುದು ಖಚಿತ ಎಂದು ಹೇಳಿದ್ದಾರೆ.
ಮಹಾಘಟಬಂಧನದೊಂದಿಗೆ ಕೈ ಜೋಡಿಸಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಈ ಮೊದಲು ಮತಗಟ್ಟೆಗಳನ್ನು ಲೂಟಿ ಮಾಡುತ್ತಿದ್ದನ್ನು ಕೇಳಿದ್ದೇವೆ. ಆದರೆ, ಈ ಬಾರಿ ಫಲಿತಾಂಶವನ್ನೇ ಲೂಟಿ ಮಾಡುವ ಸಂಶಯ ಉಂಟಾಗಿದೆ. ಎನ್ಡಿಎ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ, ಈ ಬಗ್ಗೆ ಜನರು ಕೋಪಗೊಂಡಿದ್ದಾರೆ. ರಸ್ತೆಗಳಲ್ಲಿ ರಕ್ತ ಹರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯ ಬಗ್ಗೆಯೂ ಅವರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ವಿಪಕ್ಷಗಳಿಂದ ಮತಯಂತ್ರಗಳ ಬಗ್ಗೆ ಭಾರಿ ಆಕ್ಷೇಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸಂಬಂಧದ ದೂರುಗಳನ್ನು ಆಲಿಸಲು 24 ಗಂಟೆಗಳ ಕಂಟ್ರೋಲ್ರೂಂ ಸೇವೆ ಆರಂಭಿಸಿದೆ.