ತಿರುವನಂತಪುರಂ: ಅಂತರ್ಜಾಲ ಬಳಕೆ ಸಂವಿಧಾನದಡಿಯಲ್ಲಿ 'ಮೂಲಭೂತ ಹಕ್ಕು' ಎಂದು ಕೇರಳ ಹೈಕೋರ್ಟ್ ಪ್ರತಿಪಾದಿಸಿದೆ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ. ವಿ. ಆಶಾ ಈ ತೀರ್ಪು ಪ್ರಕಟಿಸಿದ್ದಾರೆ.
ಕೇರಳದ ಕೋಯಿಕೋಡ್‌ನ ಶ್ರೀ ನಾರಾಯಣ ಕಾಲೇಜಿನ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಸಂಜೆ 6 ರಿಂದ 10 ರವರೆಗೆ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿತ್ತು. ಅಲ್ಲದೆ ಹಾಸ್ಟೆಲ್ ಆವರಣದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಲ್ಯಾಪ್ಟಾಪ್ ಬಳಸುವುದಕ್ಕೂ ನಿಷೇಧ ಹೇರಲಾಗಿತ್ತು. ಹಾಸ್ಟೆಲ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
-
Right to Access internet is fundamental right, Kerala High Court https://t.co/P4ej9n2ujT
— Bar & Bench (@barandbench) September 19, 2019 " class="align-text-top noRightClick twitterSection" data="
">Right to Access internet is fundamental right, Kerala High Court https://t.co/P4ej9n2ujT
— Bar & Bench (@barandbench) September 19, 2019Right to Access internet is fundamental right, Kerala High Court https://t.co/P4ej9n2ujT
— Bar & Bench (@barandbench) September 19, 2019
ನಿಯಮ ಸಡಿಲಿಸುವಂತೆ, ವಿದ್ಯಾರ್ಥಿನಿಯೋರ್ವಳು ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಳು. ಇದಕ್ಕೆ ಒಪ್ಪದ ಆಡಳಿತ ಮಂಡಳಿ, ವಿದ್ಯಾರ್ಥಿನಿಗೆ ತನ್ನ ಹಾಸ್ಟೆಲ್ ಕೊಠಡಿಯನ್ನು 12 ಗಂಟೆಗಳೊಳಗೆ ಖಾಲಿ ಮಾಡುವಂತೆ ಸೂಚಿಸಿತು. ಬಳಿಕ ಆಕೆಯ ಹಾಸ್ಟೆಲ್ ಕೋಣೆಗೆ ಬೀಗ ಜಡಿಯಲಾಗಿತ್ತು. ಆಕೆಗೆ ತನ್ನ ವೈಯಕ್ತಿಕ ವಸ್ತುಗಳನ್ನು ಸಂಗ್ರಹಿಸಲು ಕೂಡಾ ಅವಕಾಶ ನೀಡಲಿಲ್ಲ.
ಇದನ್ನು ವಿರೋಧಿಸಿದ ಬಾಲಕಿ, ಹಾಸ್ಟೆಲ್ ಆಡಳಿತ ಮಂಡಳಿಯು ಸಂವಿಧಾನದ 14 ಮತ್ತು 19 ನೇ ವಿಧಿಗಳನ್ನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಳು. ಬಾಲಕಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಆಶಾ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.