ETV Bharat / bharat

ಸುಶಾಂತ್​ ಸಿಂಗ್​ ಪ್ರಕರಣ: ಡ್ರಗ್ಸ್​​ ಆರೋಪದ ಮೇಲೆ ರಿಯಾ ಚಕ್ರವರ್ತಿ ಸಹೋದರನ ಬಂಧನ - ರಿಯಾ ಚಕ್ರವರ್ತಿ ಸಹೋದರನ ಬಂಧನ

ಸುಶಾಂತ್ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್ ಸೇರಿದ್ದಂತೆ ಅನೇಕರು ಡ್ರಗ್ಸ್​​​​ ಪೆಡ್ಲರ್​ಗಳ ಜೊತೆಗಿನ ವಾಟ್ಸಪ್ ಚಾಟ್ ಬಹಿರಂಗವಾದ ಕಾರಣ ಇದೀಗ ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

Rhea Chakraborty's Brother Arrested
Rhea Chakraborty's Brother Arrested
author img

By

Published : Sep 4, 2020, 10:20 PM IST

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಯುತ್ತಿದ್ದು, ಇದೀಗ ಡ್ರಗ್ಸ್​​ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿ ಸಹೋದರ ಹಾಗೂ ಸುಶಾಂತ್​ ರಜಪೂತ್​ ಮ್ಯಾನೇಜರ್​ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಟಿ ರಿಯಾ ಚಕ್ರವರ್ತಿ ಡ್ರಗ್ಸ್​​ ಪೆಡ್ಲರ್​ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ವಿಚಾರ ಹೊರಬರುತ್ತಿದ್ದಂತೆ ಮಾದಕ ವಸ್ತು ನಿಯಂತ್ರಣ ಬ್ಯೂರೋ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಜತೆಗೆ ಇಂದು ಬೆಳಗ್ಗೆ ಅವರ ಮನೆ ಮೇಲೆ ದಾಳಿ ನಡೆಸಿದ್ದರು.

ಇದರ ಬೆನ್ನಲ್ಲೇ ರಿಯಾ ಸಹೋದರ ಶೋವಿಕ್ ಚಕ್ರವರ್ತಿ​ ಹಾಗೂ ಸುಶಾಂತ್​ ಸಿಂಗ್​​ ರಜಪೂತ್​ ಮ್ಯಾನೇಜರ್​​ ಸ್ಯಾಮುಯಿಲ್​​ ಮಿರಾಂಡ್​ ವಿಚಾರಣೆ ನಡೆಸಿದ್ದರು. ತೀವ್ರ ವಿಚಾರಣೆ ಬಳಿಕ ಇದೀಗ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಕುರಿತು ಎನ್‌ಸಿಪಿ ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್) ಕಾಯ್ದೆಯ ಸೆಕ್ಷನ್ 20, 22, 27 ಮತ್ತು 29 ರ ಅಡಿಯಲ್ಲಿ ರಿಯಾ ಚಕ್ರವರ್ತಿ, ಅವಳ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಇತರರ ವಿರುದ್ಧವೂ ಎನ್‌ಸಿಬಿ ಇತ್ತೀಚೆಗೆ ಪ್ರಕರಣ ದಾಖಲಿಸಿತ್ತು. ಇದೀಗ ಈ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿ ಬಂಧನವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.