ಕೋಟ (ರಾಜಸ್ಥಾನ): ನಿವೃತ್ತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರ ಮೃತದೇಹವು ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ರಾಜಸ್ಥಾನದ ಕೋಟದಲ್ಲಿ ಈ ಘಟನೆ ನಡೆದಿದ್ದು, ವೀರೇಂದ್ರ ಸಿಂಗ್ ಪಾಠಕ್ (65) ಎಂಬುವವರು ಮೃತಪಟ್ಟಿದ್ದಾರೆ. ದೆಹಲಿ-ಮುಂಬೈ ಮಾರ್ಗದ ರೈಲ್ವೆ ಹಳಿಗಳ ಮೇಲೆ ಅವರ ಮೃತದೇಹ ಪತ್ತೆಯಾಗಿದೆ.
ಮೃತರು ಪಾಠಕ್ ನಗರದ ಸರಸ್ವತಿ ಕಾಲೋನಿಯ ನಿವಾಸಿಯಾಗಿದ್ದು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ (ಎಡಿಜೆ) ನಿವೃತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಇಂದು ಮುಂಜಾನೆ 4.30 ರ ಸುಮಾರಿಗೆ ರೈಲ್ವೆ ಪಾಸಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅದರ ಮುಂದೆ ಜಿಗಿದಿರಬಹುದು ಎಂದು ಹೇಳಲಾಗಿದೆ. ಅವರ ಕಾರನ್ನು ರೈಲ್ವೇ ಹಳಿಗಳಿಂದ 100 ಮೀಟರ್ ದೂರದಲ್ಲಿ ಲಾಕ್ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.