ಅಮರಾವತಿ: ಲಾಕ್ಡೌನ್ ವಿಸ್ತರಣೆಯನ್ನು ಕೇವಲ ರೆಡ್ ಝೋನ್ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಇಂದು ಪ್ರಧಾನಿ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 676 ಮಂಡಲ್‌ಗಳು ಇರುವುದರಿಂದ, ಅವುಗಳಲ್ಲಿ 81 ಮಂಡಲ್ಅನ್ನು ಕೊರೊನಾ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದೆ. ಲಾಕ್ಡೌನ್ ಈ ಕೆಂಪು ವಲಯಗಳಿಗೆ ಸೀಮಿತಗೊಳಿಸುವಂತೆ ಪ್ರಧಾನಿಯನ್ನು ಜಗನ್ ಕೇಳಿದ್ದಾರೆ.
ಚಿತ್ರಮಂದಿರ, ಮಾಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸದ್ಯಕ್ಕೆ ಮುಚ್ಚಬಹುದು. ರೆಡ್ ಝೋನ್ಗಳಲ್ಲಿ ಸಂಪೂರ್ಣ ಲಾಕ್ಡೌನ್ ತಂದರೆ ಉತ್ತಮ. ಆದರೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.