ಆಂಧ್ರಪ್ರದೇಶ: ರಾಜ್ಯದ ಒಂಗೋಲ್ ಜಿಲ್ಲೆಯ ರಾಮಚಂದ್ರಪುರಂನ ಕೊಡೂರಿ ವೆಂಕಟೇಶ್ವರಲು ಹಾಗೂ ಅವರ ಕುಟುಂಬಸ್ಥರು ದಯಾ ಮರಣ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಎಂಪಿಟಿಸಿಯ ಮಾಜಿ ಸದಸ್ಯರಾಗಿರುವ ವೆಂಕಟೇಶ್ವರಲು, ಗ್ರಾಮದ ಜಮೀನಿಗೆ ಪಾಸ್‌ಬುಕ್‌ಗಳನ್ನು ತಯಾರಿಸಿದ್ದಕ್ಕಾಗಿ ಸ್ಥಳೀಯರು ಈ ಹಿಂದೆ ಅವರನ್ನು ಪ್ರಶ್ನಿಸಿದ್ದರು.
ಅಂದಿನಿಂದ ಗ್ರಾಮದಲ್ಲಿ ವಿವಾದ ಪ್ರಾರಂಭವಾಗಿದ್ದು, ಅವರ ಕುಟುಂಬದ ದೋಣಿ, ಮೀನಿನ ಬಲೆ ಮತ್ತು ಎಂಜಿನ್ ಅನ್ನು ಅಪಹರಿಸಿದ್ದರು. ಬಳಿಕ ಅವರ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು.
ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಸಭೆ ನಡೆಸಿ ಸ್ಥಳೀಯರೊಂದಿಗೆ ಮಾತನಾಡಿದರೂ ಪರಿಸ್ಥಿತಿ ಸುಧಾರಿಸಿಲ್ಲ. ವೆಂಕಟೇಶ್ವರಲು ಅವರ ಕಿರಿಯ ಮಗ ರಾಜು ಇತ್ತೀಚೆಗೆ ಗ್ರಾಮದಲ್ಲಿ ವಾಸಿಸಲು ಹೋದರು, ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಅದೇ ದಿನ ಅವರು ವೆಟ್ಟಪಾಲೆಂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ನ್ಯಾಯ ದೊರಕಿಲ್ಲ. ಮೀನುಗಾರಿಕೆಗೆ ಹೋಗುವುದು ಸಹ ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ಅವರು ತಮ್ಮ ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಸಾಯಲು ಅವಕಾಶ ನೀಡುವಂತೆ ಹೈಕೋರ್ಟ್ಗೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದಾರೆ. ಈ ಕುಟುಂಬದ ಪುಟ್ಟ ಹುಡುಗಿ ಸಿಎಂ ಜಗನ್ಗೂ ಪತ್ರ ಬರೆದಿದ್ದಾಳೆ.