ನವದೆಹಲಿ: ಕೃಷಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ಜನವರಿ 26ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 84 ಜನರನ್ನು ಬಂಧಿಸಲಾಗಿದ್ದು, 38 ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ 1,700 ಮೊಬೈಲ್ ಕ್ಲಿಪ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕರಿಂದ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರ ಅಪರಾಧ ವಿಭಾಗ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡ ಶನಿವಾರ ಕೆಂಪು ಕೋಟೆ ಪ್ರದೇಶವನ್ನು ಪರಿಶೀಲಿಸಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾದ ಇಬ್ಬರನ್ನು ಹುಡುಕಲು ದೆಹಲಿ ಪೊಲೀಸರ ತಂಡ ಜಲಂಧರ್‌ಗೆ ತೆರಳಿದೆ.
ಇದನ್ನೂ ಓದಿ:ಕೇಂದ್ರ ಬಜೆಟ್ನತ್ತ ರಾಜ್ಯದ ಚಿತ್ತ... ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ಇಟ್ಟಿರುವ ಬೇಡಿಕೆಗಳೇನು ಗೊತ್ತಾ?
ಗಣರಾಜ್ಯೋತ್ಸವದಂದು, ಪ್ರತಿಭಟನಾಕಾರರು ಪೂರ್ವನಿರ್ಧರಿತ ಮಾರ್ಗವನ್ನು ಅನುಸರಿಸದೆ ಬ್ಯಾರಿಕೇಡ್‌ಗಳನ್ನು ತಳ್ಳಿ ಕೆಂಪುಕೋಟೆ ಪ್ರವೇಶಿಸಿದ್ದರು. ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಲ್ಲದೆ ರಾಷ್ಟ್ರ ರಾಜಧಾನಿಯ ಹಲವೆಡೆ ಆಸ್ತಿ ಧ್ವಂಸಗೊಳಿಸಿದ್ದರು. ಪ್ರತಿಭಟನೆ ವೇಳೆ ಐಟಿಒನಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.