ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಗದಿತ ಏಳು ದಿನಗಳು ಎರಡು ಗಂಟೆಗಳ ಕಾಲ ವಿಮಾನ ಟೇಕ್ ಆಫ್ ಮತ್ತು ಲ್ಯಾಡಿಂಗ್ಗೆ ನಿಷೇಧ ಹೇರಿ ಭಾರತೀಯ ವಿಮಾನಯಾನ ಪ್ರಾಧಿಕಾರ (ಎಎಐ) ಏರ್ಮೆನ್ಗಳಿಗೆ ನೋಟಿಸ್ (ನೋಟಂ) ಜಾರಿಗೊಳಿಸಿದೆ.
ಜನವರಿ 18 ರಿಂದ 20 ಹಾಗೂ 24ರಿಂದ 26ರವರೆಗೆ ಒಟ್ಟು ಏಳು ದಿನಗಳು ಬೆಳಗ್ಗೆ 10:35ರಿಂದ ಮಧ್ಯಾಹ್ನ 12:15ರವರೆಗೆ ಎರಡು ಗಂಟೆಗಳ ಕಾಲ ನಿಷೇಧ ಹೇರಲಾಗಿದೆ.
ಇದರಿಂದಾಗಿ ಈ ದಿನಗಳಲ್ಲಿ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಗಳಲ್ಲಿ ಅಲ್ಪ ವ್ಯತ್ಯಯವಾಗಲಿದೆ.