ನವದೆಹಲಿ: ಹಂಗಾಮಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗುತ್ತಿದ್ದ ಮಾಧ್ಯಮ ವರದಿಗಳ ವಿರುದ್ಧ ಹರಿಹಾಯ್ದ ಕೇಂದ್ರ ಸರ್ಕಾರ, ಜೇಟ್ಲಿ ಅವರ ಆರೋಗ್ಯ ಸ್ಥಿರವಾಗಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದೆ.
ಜೇಟ್ಲಿ ಅವರ ಆರೋಗ್ಯ ಕ್ಷೀಣಿಸಿದೆ ಎಂಬ ಮಾಧ್ಯಮ ವರದಿಗಳು ಆಧಾರ ರಹಿತ ಹಾಗೂ ಸುಳ್ಳಿನಿಂದ ಕೂಡಿವೆ. ಇಂತಹ ವದಂತಿಗಳನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ಸರ್ಕಾರದ ವಕ್ತಾರ ಸಿತಾನ್ಶು ಕರ್ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
-
Reports in a section of media regarding Union Minister Shri Arun Jaitley's health condition are false and baseless. Media is advised to stay clear of rumour mongering.
— Sitanshu Kar (@DG_PIB) May 26, 2019 " class="align-text-top noRightClick twitterSection" data="
">Reports in a section of media regarding Union Minister Shri Arun Jaitley's health condition are false and baseless. Media is advised to stay clear of rumour mongering.
— Sitanshu Kar (@DG_PIB) May 26, 2019Reports in a section of media regarding Union Minister Shri Arun Jaitley's health condition are false and baseless. Media is advised to stay clear of rumour mongering.
— Sitanshu Kar (@DG_PIB) May 26, 2019
66 ವರ್ಷದ ಜೇಟ್ಲಿ ಅವರು ಚುನಾವಣೆ ಸಮಾವೇಶಗಳಲ್ಲಿ ಭಾಗಿ ಆಗಿರಲಿಲ್ಲ. ಜೊತೆಗೆ ಚುನಾವಣೆ ಫಲಿತಾಂಶದಲ್ಲಿ ಭರ್ಜರಿ ವಿಜಯ ಸಾಧಿಸಿದ್ದ ದಿನ ಸಂಜೆ ನಡೆದ ಬಿಜೆಪಿ ಕಚೇರಿಯ ಸಭೆಯಲ್ಲಿ ಸಹ ಪಾಲ್ಗೊಂಡಿರಲಿಲ್ಲ. ಎರಡನೇ ಅವಧಿಯಲ್ಲಿ ವಿತ್ತ ಸಚಿವರಾಗಿ ಮುಂದುವರಿಯುತ್ತಿಲ್ಲ ಎಂಬ ವರದಿಗಳು ಸಹ ಪ್ರಕಟವಾಗಿದ್ದವು. ಈ ಎಲ್ಲ ಅಂಶಗಳನ್ನು ಇರಿಸಿಕೊಂಡ ಮಾಧ್ಯಮಗಳು ಜೇಟ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದೆಂದು ವರದಿ ಮಾಡಿದ್ದವು.