ಮುಂಬೈ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಎಲ್ಲ ಪ್ರಾಂಚೈಸಿ ತಮ್ಮ ತಮ್ಮ ತಂಡ ಬಲಿಷ್ಠ ಮಾಡಿಕೊಳ್ಳುತ್ತಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಕೆಲ ಮಹತ್ವದ ಪ್ಲೇಯರ್ಸ್ಗಳಿಗೆ ತಂಡದಿಂದ ಗೇಟ್ಪಾಸ್ ನೀಡಿದೆ.
ತಂಡದಿಂದ ಆರಂಭಿಕ ಪ್ಲೇಯರ್ ಕ್ರಿಸ್ ಲಿನ್ಗೆ ತಂಡದಿಂದ ಹೊರಹಾಕಿದ್ದು, ಇದೀಗ ಅದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಆವೃತ್ತಿಯಲ್ಲಿ ಅವರು ಚೆನ್ನಾಗಿ ಆಡಿಲ್ಲ ಎಂದು ಇದೀಗ ಕೈಬಿಟ್ಟಿದೆ. ಆದರೆ ಲೀನ್ ಟಿ10 ಲೀಗ್ನಲ್ಲಿ ಆರ್ಭಟಿಸಿದ್ದು, ತಾವು ಎದುರಿಸಿರುವ 30 ಎಸೆತಗಳಲ್ಲಿ 90ರನ್ಗಳಿಕೆ ಮಾಡಿ ಎಲ್ಲರು ಹೆಬ್ಬೇರುವಂತೆ ಮಾಡಿದ್ದಾರೆ. ಇದು ಟಿ10 ಕ್ರಿಕೆಟ್ನಲ್ಲಿ ಮೂಡಿ ಬಂದಿರುವ ಅತಿದೊಡ್ಡ ಸ್ಕೋರ್ ಆಗಿದೆ.
ಮರಾಠ ಅರೇಬಿಯನ್ಸ್ ತಂಡದ ಪರ ಬ್ಯಾಟ್ ಬೀಸಿರುವ 29 ವರ್ಷದ ಬಲಗೈ ಬ್ಯಾಟ್ಸ್ಮನ್, ಕೇವಲ 30 ಎಸೆತಗಳಲ್ಲಿ 9 ಫೋರ್ ಮತ್ತು 7 ಸಿಕ್ಸರ್ ಸೇರಿ 91 ರನ್ ಸಿಡಿಸಿ ಮಿಂಚಿದ್ದು, ಇವರ ಆಟಕ್ಕೆ ಯುವರಾಜ್ ಸಿಂಗ್ ಸಹ ಫಿದಾ ಆಗಿದ್ದಾರೆ. ಇದೇ ವೇಳೆ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕ್ರಿಸ್ ಲಿನ್ ಅವರನ್ನ ಕೈಬಿಟ್ಟು ದೊಡ್ಡ ತಪ್ಪು ಮಾಡಿದ್ದು, ಇದೀಗ ಶಾರುಖ್ ಖಾನ್ಗೆ ಅವರಿಗೆ ಸರಿಯಾದ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.
ಕೆಲವೊಂದು ಪಂದ್ಯಗಳಲ್ಲಿ ಕೋಲ್ಕತ್ತಾ ತಂಡಕ್ಕೆ ಅದ್ಭುತ ಆರಂಭ ಒದಗಿಸಿದ್ದ ಈ ಪ್ಲೇಯರ್ಗೆ ಯಾವ ಕಾರಣಕ್ಕಾಗಿ ಅವರು ತಂಡದಿಂದ ಕೈಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇಂದಿನ ಅವರ ಆಟ ನಿಜಕ್ಕೂ ಅಮೋಘವಾಗಿತ್ತು ಎಂದು ತಿಳಿಸಿದ್ದಾರೆ.