ETV Bharat / bharat

ಕೋವಿಡ್​ನಿಂದ ಸಾವು: ಆಟೋದಲ್ಲಿ ಈ ರೀತಿಯಾಗಿ ವ್ಯಕ್ತಿಯ ಮೃತದೇಹ ರವಾನೆ! - ಆಟೋ ರಿಕ್ಷಾ ಮೃತದೇಹ

ಕೊರೊನಾ ವೈರಸ್​ನಿಂದ ಸಾವನ್ನಪ್ಪಿದ ವ್ಯಕ್ತಿಯೋರ್ವನ ಮೃತದೇಹವನ್ನ ಆಟೋರಿಕ್ಷಾದಲ್ಲಿ ರವಾನೆ ಮಾಡಿರುವ ಘಟನೆ ನಡೆದಿದೆ.

COVID-19 patient
COVID-19 patient
author img

By

Published : Jul 12, 2020, 4:50 AM IST

ನಿಜಾಮಾಬಾದ್​​(ತೆಲಂಗಾಣ) : ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯೋರ್ವನ ಮೃತದೇಹವನ್ನ ಆಟೋ ರಿಕ್ಷಾದಲ್ಲಿ ಅಮಾನವೀಯ ರೀತಿಯಲ್ಲಿ ರವಾನೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್​​ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಸೋಂಕಿನಿಂದ 50 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮೃತದೇಹವನ್ನ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಆಸ್ಪತ್ರೆ ಆ್ಯಂಬುಲೆನ್ಸ್​ ನೀಡದ ಕಾರಣ ವ್ಯಕ್ತಿಯ ಮೃತದೇಹ ಆಟೋದಲ್ಲಿ ಸ್ಮಶಾನದವರೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಮೆಲ್ವಿಚಾರಕ ಡಾ. ನಾಗೇಶ್ವರ್​​ ರಾವ್​, ಮೃತ ವ್ಯಕ್ತಿಯ ಸಂಬಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದು, ಅವರ ಮನವಿ ಮೇರೆಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಆಟೋ ರಿಕ್ಷಾದಲ್ಲಿ ಶವ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಆಸ್ಪತ್ರೆ ಆ್ಯಂಬುಲೆನ್ಸ್​​ ಬೇರೆಡೆ ಹೋಗಿದ್ದರಿಂದ ಅದು ಬರುವವರೆಗೂ ಕಾಯುವಂತೆ ಹೇಳಲಾಗಿತ್ತು. ಆದರೆ ಸಂಬಂಧಿಕರು ತಮ್ಮದೇ ಆಟೋದಲ್ಲಿ ಸ್ಮಶಾನದವರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

50 ವರ್ಷದ ವ್ಯಕ್ತಿ ಕೋವಿಡ್​ ಕಾರಣ ಕಳೆದ ಜೂನ್​ 27ರಂದು ನಿಜಾಮಾಬಾದ್​ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ದಾಖಲಾಗದೇ ನಿನ್ನೆ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.