ETV Bharat / bharat

ಕೋವಿಡ್​-19 ಪರೀಕ್ಷೆಗೆ ನೋ ಎಂದ ಬಾಲಿವುಡ್​ ನಟಿ ರೇಖಾ - ಮಹಾರಾಷ್ಟ್ರದ ಮುಂಬೈ

ಕಳೆದ ವಾರಾಂತ್ಯದಲ್ಲಿ, 'ಸೀ ಸ್ಪ್ರಿಂಗ್ಸ್' ಹೆಸರಿನ ರೇಖಾ ಅವರ ಬಂಗಲೆಗಳನ್ನು ಕಂಟೇನ್‌ಮೆಂಟ್‌ ವಲಯವೆಂದು ಘೋಷಿಸಿದೆ ಹಾಗೂ ಬಿಎಂಸಿ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ ಎಂದು ವರದಿಯಾಗಿತ್ತು..

Rekha unwilling to get tested for COVID-19
ಕೋವಿಡ್​-19 ಪರೀಕ್ಷೆಗೆ ನೋ ಎಂದ ಬಾಲಿವುಡ್​ ನಟಿ ರೇಖಾ...!!
author img

By

Published : Jul 15, 2020, 7:00 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್‌ನ ಹಿರಿಯ ನಟಿ ರೇಖಾ ಅವರ ಭದ್ರತಾ ಸಿಬ್ಬಂದಿಗೆ ಕಳೆದ ವಾರ ಕೊರೊನಾ ಸೋಂಕು​ ತಗುಲಿರುವುದು ದೃಢವಾಗಿತ್ತು. ನಿಯಮಗಳ ಪ್ರಕಾರ, ನಟಿ ಸೇರಿದಂತೆ ಮನೆಯಲ್ಲಿ ವಾಸಿಸುವ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ಆದರೆ, ವರದಿಗಳ ಪ್ರಕಾರ, ನಟಿ ಪರೀಕ್ಷೆಗೆ ಒಳಗಾಗಲು ಸಿದ್ಧರಿಲ್ಲ ಮತ್ತು ನೈರ್ಮಲ್ಯೀಕರಣ ಪ್ರಕ್ರಿಯೆಯನ್ನು ಕೈಗೊಳ್ಳಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನುಮತಿಸಿಲ್ಲ ಎಂದು ತಿಳಿದು ಬಂದಿದೆ.

Rekha unwilling to get tested for COVID-19
ಬಾಲಿವುಡ್‌ನ ಹಿರಿಯ ನಟಿ ರೇಖಾ

ವಿವಿಧ ವರದಿಗಳ ಪ್ರಕಾರ, ಅಧಿಕಾರಿಗಳು ರೇಖಾ ಅವರ ಬಂಗಲೆ ತಲುಪಿದಾಗ ಅವರ ವ್ಯವಸ್ಥಾಪಕಿ ಫರ್ಜಾನಾ ಅಧಿಕಾರಿಗಳಿಗೆ ತಮ್ಮ ಸಂಖ್ಯೆಯನ್ನು ನೀಡಿ ಬರುವ ಮೊದಲು ಕರೆ ಮಾಡಿ ತಿಳಿಸುವಂತೆ ಹೇಳಿದ್ದಾರೆ. ಆ ನಂತರ ರೇಖಾ ಅವರು ಕೋವಿಡ್​-19 ಸೋಂಕು ಇದ್ದಂತಹ ಯಾರೊಬ್ಬರು ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಅವರಿಗೆ ಕೋವಿಡ್​-19 ಪರೀಕ್ಷೆಯ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಯಿತು.

ಕಳೆದ ವಾರಾಂತ್ಯದಲ್ಲಿ, 'ಸೀ ಸ್ಪ್ರಿಂಗ್ಸ್' ಹೆಸರಿನ ರೇಖಾ ಅವರ ಬಂಗಲೆಗಳನ್ನು ಕಂಟೇನ್‌ಮೆಂಟ್‌ ವಲಯವೆಂದು ಘೋಷಿಸಿದೆ ಹಾಗೂ ಬಿಎಂಸಿ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ ಎಂದು ವರದಿಯಾಗಿತ್ತು. ಆದರೆ, ಕಳೆದ ಕೆಲವು ವಾರಗಳಿಂದ ಪ್ರತ್ಯೇಕತೆಯಲ್ಲಿ ವಾಸಿಸುತ್ತಿರುವ ಈ ನಟಿಗೆ ಕೋವಿಡ್​ ಪರೀಕ್ಷೆಯನ್ನು ಮಾಡಲಾಗಿದೆಯೇ? ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.