ತಿರುವನಂತಪುರಂ: ಕೇರಳದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ಮತದಾನ ನಡೆಯುತ್ತಿದ್ದು, ಈ ನಡುವೆಯೂ ರಾಜ್ಯದ 7 ಜಿಲ್ಲೆಗಳಲ್ಲಿ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಳೆಯಿಂದಾಗಿ ರಾಜ್ಯದ ಹಲವು ರಾಜ್ಯಗಳು ತತ್ತರಿಸಿದ್ದು, ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರ ರೆಡ್ ಅಲರ್ಟ್ ಘೋಷಿಸಿದೆ. ರಾಜಧಾನಿ ತಿರುವನಂತಪುರಂ, ಎರ್ನಾಕುಲಂ, ಅಲೆಪ್ಪಿ, ತ್ರಿಶೂರ್, ಕೊಟ್ಟಾಯಂ, ಇಡುಕ್ಕಿ ಹಾಗೂ ಪಲಕ್ಕಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗೃತಾ ಕ್ರಮ ವಹಿಸಿಕೊಳ್ಳಲು ಜನತೆಗೆ ಸೂಚಿಸಲಾಗಿದೆ.
ಎರ್ನಾಕುಲಂ ವಿಧಾನಸಭಾ ಕ್ಷೇತ್ರದ 10 ಮತಕೇಂದ್ರಗಳು ಮಳೆಯಿಂದ ತೊಂದರೆಗೊಳಗಾಗಿವೆ. ಹೀಗಾಗಿ ಮಳೆ ನಡುವೆಯೇ ಮತದಾರರು ಮತದಾನ ಮಾಡುವಂತಾಗಿದೆ. ಈ ಬಗ್ಗೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಸುಹಾಸ್ ತಿಳಿಸಿದ್ದಾರೆ.