ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್‌ಬಿಐ) ಹಣಕಾಸು ಪರಾಮರ್ಶೆ ನೀತಿ ಸಮಿತಿಯ (ಎಂಪಿಸಿ) ಸಭೆಯು ಆಗಸ್ಟ್ 7ರಂದು ನಡೆಯಲಿದ್ದು, ಈ ವೇಳೆ ಮತ್ತೆ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಆರ್‌ಬಿಐ ತನ್ನ ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಇಂದು ನಡೆಯುವ ಸಭೆಯಲ್ಲಿ ಕಡಿತಗೊಳ್ಳಬಹುದು. ಪ್ರಸ್ತುತ ಶೇ 5.75ರಷ್ಟು ಇರುವ ಬಡ್ಡಿ ದರ ಶೇ 5.50ಕ್ಕೆ ತಲುಪಲಿದೆ. ದೇಶದ ಹಲವು ಭಾಗದಲ್ಲಿ ಕ್ಷೀಣಿಸಿದ್ದ ಪೂರ್ವ ಮುಂಗಾರು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಹಾಗೂ ದುರ್ಬಲ ಹಣದುಬ್ಬರಿಂದ ದರ ಇಳಿಕೆ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ಆರ್‌ಬಿಐ ತನ್ನ ದರ ಕಡಿತಗೊಳಿಸದಿದ್ದರೇ, ಇದು ಏಷ್ಯಾದ ಬ್ಯಾಂಕ್ಗಳ ಮೇಲೆ ಆಕ್ರಮಣ ಮಾಡಿದಂತೆ ಆಗಲಿದೆ. ದಶಕದ ಹಿಂದೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂಭವಿಸಿದ್ದಾಗ, ಹಲವು ರಾಷ್ಟ್ರಗಳಲ್ಲಿನ ಕೇದ್ರೀಯ ಬ್ಯಾಂಕ್ಗಳು ಆರ್ಥಿಕ ಬೆಳವಣಿಗೆಯ ಪುನರುಜ್ಜೀವನಗೊಳಿಸಲು ದರ ಕಡಿತಗೊಳಿಸಿದ್ದವು. ಆದರೆ, ಆರ್‌ಬಿಐ ಕೊನೆಯದಾಗಿ ಸರಣಿ ದರ ಕಡಿತಕ್ಕೆ ಮುಂದಾಗಿತ್ತು. ಇಂತಹ ನಡೆ ಮತ್ತೆ ಪ್ರದರ್ಶಿಸುವುದಿಲ್ಲ ಎಂಬುದು ತಜ್ಞರ ಅಂಬೋಣ.
ಪ್ರಸ್ತುತ ದೇಶದ ಆರ್ಥಿಕತೆ ಹಿಡಿತ ತಪ್ಪಿದೆ. ದೊಡ್ಡ ಆರ್ಥಿಕ ವಲಯದ ಚಟುವಟಿಕೆಗಳು ಕಳೆಗುಂದುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. 2019ರ ಏಪ್ರಿಲ್ ತಿಂಗಳ ವಿತ್ತೀಯ ನೀತಿ ಪರಾಮರ್ಶೆ ಸಭೆಯಿಂದಲೂ ರೆಪೊ ದರವನ್ನು ಇಳಿಕೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಜೂನ್ನಲ್ಲಿ ನಡೆದ ವಿತ್ತೀಯ ನೀತಿ ಪರಾಮರ್ಶೆ ಸಭೆ ವೇಳೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದರು.