ETV Bharat / bharat

ಚಾಕುವಿನ ಮೇಲೆ  ಮುಗ್ಗರಿಸಿದ ಮಗು: ಬುರುಡೆಗೆ ಸಿಕ್ಕಿಹಾಕಿಕೊಂಡಿದ್ದ ಆಯುಧವನ್ನು ತೆಗೆದ ವೈದ್ಯರು

ಮೀನು ಕತ್ತರಿಸುವ ಚಾಕುವಿನ ಮೇಲೆ ಮಗು ಮುಗ್ಗರಿಸಿದ ಪರಿಣಾಮ ತಲೆಬುರುಡೆಯೊಳಗೆ ಚಾಕು ಹೊಕ್ಕಿತ್ತು. ಮಿದುಳಿನ ಅಪಧಮನಿ ಹರಿದುಹೋಗಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗುವಿನ ಪ್ರಾಣ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಅಪರೂಪದ ಶಸ್ತ್ರಚಿಕಿತ್ಸೆ
author img

By

Published : Aug 12, 2019, 5:09 PM IST

ಕೊಲ್ಕತ್ತಾ: ಮಿದುಳು ನಿಷ್ಕ್ರಿಯತೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವೊಂದನ್ನು ಇಲ್ಲಿನ ಎಸ್​ಎಸ್​ಕೆಎಂ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ಬದುಕಿಸಿದ್ದಾರೆ.

ಐಜಿಜೂರ್​ ರೆಹಮಾನ್​ (5) ಬದುಕುಳಿದ ಮಗು. ಮೀನು ಕತ್ತರಿಸುವ ಚಾಕುವಿನ ಮೇಲೆ ಮುಗ್ಗರಿಸಿದ ಪರಿಣಾಮವಾಗಿ ತಲೆಬುರುಡೆಯೊಳಗೆ ಚಾಕು ಹೊಕ್ಕಿತ್ತು. ಮಿದುಳಿನ ಅಪಧಮನಿ ಹರಿದುಹೋಗಿದ್ದರಿಂದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು.

ಕೂಡಲೇ ಮಗುವನ್ನು ಮುಶಿರಾಬಾದ್​ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಕೆಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗು ಚೇತರಿಸಿಕೊಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ನಿರಂತರವಾಗಿ ರಕ್ತಸ್ರಾವವಾಗುತ್ತಿತ್ತು. ಪರಿಣಾಮವಾಗಿ ಮಗುವು ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆಯಿತ್ತು. ವೈದ್ಯರು ಬಹಳಷ್ಟು ಎಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಸದ್ಯ ರೆಹಮಾನ್​ ಆರೋಗ್ಯವಾಗಿದ್ದಾನೆ.

Intro:Body:

ಮೀನು ಕತ್ತರಿಸುವ ಚಾಕುವಿನ ಮೇಲೆ ಬಿದ್ದ ಮಗು: ಅಪರೂಪದ ಶಸ್ತ್ರಚಿಕಿತ್ಸೆಯಿಂದ ಮರುಜೀವ

ಕೋಲ್ಕೊತ್ತಾ: ಮಿದುಳು ನಿಷ್ಕ್ರಿಯತೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವೊಂದನ್ನು ಇಲ್ಲಿನ ಎಸ್​ಎಸ್​ಕೆಎಂ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ  ಬದುಕಿಸಿದ್ದಾರೆ.

ಐಜಿಜೂರ್​ ರೆಹಮಾನ್​ (5) ಬದುಕುಳಿದ ಮಗು. ಮೀನು ಕತ್ತರಿಸುವ ಚಾಕುವಿನ ಮೇಲೆ ಮುಗ್ಗರಿಸಿದ ಪರಿಣಾಮವಾಗಿ ತಲೆಬುರುಡೆಯೊಳಗೆ ಚಾಕು ಹೊಕ್ಕಿತ್ತು. ಮಿದುಳಿನ ಅಪಧಮನಿ ಹರಿದುಹೋಗಿದ್ದರಿಂದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. 

ಕೂಡಲೇ ಮಗುವನ್ನು ಮುಶಿರಾಬಾದ್​ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಕೆಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗು ಚೇತರಿಸಿಕೊಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ನಿರಂತರವಾಗಿ ರಕ್ತಸ್ರಾವವಾಗುತ್ತಿತ್ತು. ಪರಿಣಾಮವಾಗಿ ಮಗುವು ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆಯಿತ್ತು. ವೈದ್ಯರು ಬಹಳಷ್ಟು ಎಚ್ಚರಿಕೆವಹಿಸಿ ಶಸ್ತ್ರಚಿಕತ್ಸೆ ನಡೆಸಿದ್ದು, ಸದ್ಯ ರೆಹಮಾನ್​ ಆರೋಗ್ಯವಾಗಿದ್ದಾನೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.