ಬುರ್ದ್ವಾನ್: ಪೂರ್ವ ಬರ್ದ್ವಾನ್‌ನ ಬ್ಲಾಕ್ ನಂ 1 ರ ಕಾಲಿಗ್ರಾಮ್ ದಾಸ್‌ಪುರ ಪ್ರದೇಶದಲ್ಲಿ ಅಪರೂಪದ ಹಳದಿ ಆಮೆ ಪತ್ತೆಯಾಗಿದ್ದು, ಅದನ್ನು ರಕ್ಷಿಸಲಾಗಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ದೇಬಾಶಿಸ್ ಶರ್ಮಾ ಟ್ವಿಟರ್ನಲ್ಲಿ ಈ ಕರಿತು ತಿಳಿಸಿದ್ದು, ಪಶ್ಚಿಮ ಬಂಗಾಳದಲ್ಲಿ ದೊರೆತಿರುವ ಈ ಅಪರೂಪದ ಆಮೆಯನ್ನ ರಕ್ಷಿಸಲಾಗಿದೆ ಎಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.
ನಂತರ ಆಮೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಟೈರೋಸಿನ್ ವರ್ಣದ್ರವ್ಯದ ಅನುಪಸ್ಥಿತಿಯಿಂದ ಅನುವಂಶಿಕ ರೂಪಾಂತರ ಅಥವಾ ಜನ್ಮಜಾತ ಕಾಯಿಲೆಯ ಪರಿಣಾಮವಾಗಿ ಆಮೆಗೆ ಹಳದಿ ಬಣ್ಣ ಬಂದಿರಬಹುದೆಂದು ಅಂದಾಜಿಸಲಾಗಿದೆ.
ಈ ವರ್ಷ ಇಲ್ಲಿಯವರೆಗೆ ಎರಡು ಹಳದಿ ಆಮೆಗಳನ್ನು ರಕ್ಷಿಸಲಾಗಿದೆ. ಈ ಹಿಂದಿನದನ್ನು ಜುಲೈನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ರಕ್ಷಿಸಲಾಯಿತು.